ಧಾರವಾಡ: ಸಿದ್ಧರಾಮಯ್ಯ ಅವರೇ ನಿಮಗೆ ಎರಡನೇ ಬಾರಿ ಸಿಎಂ ಮಾಡಲ್ಲ. ನೀವು ಚುನಾವಣೆಯಲ್ಲಿ ಗೆಲ್ಲಲ್ಲ. ನಿಮ್ಮ ಪಕ್ಷದ ಕಚ್ಚಾಟದಲ್ಲೇ ನೀವು ಮುಳುಗಿ ಹೋಗುತ್ತೀರಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.
ಧಾರವಾಡ ಕಲಾಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ರಾಹುಲ್ ಗಾಂಧಿಯ ಮುಂದೆ ಕೈ ಕಟ್ಡಿ ನಿಲ್ಲುತ್ತಿರಿ. ನಾನು ನಿಮಗೆ ಪ್ರಶ್ನೆ ಮಾಡುತ್ತೆನೆ. 58 ವರ್ಷದಲ್ಲಿ ಅಧಿಕಾರದಲ್ಲಿದ್ದೀರಿ. ನೀವು ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಅವರ ಹೆಸರು ಎಷ್ಟು ಯೋಜನೆಗೆ ಇಟ್ಟಿದ್ದೀರಿ ಎಂಬುದನ್ನ ಹೇಳಿ. ದೆಹಲಿಯೊಂದದರಲ್ಲೇ ಇಂದಿರಾ ಗಾಂಧಿ ನೆಹರೂ, ರಾಜೀವ್ ಗಾಂಧಿ ಹೆಸರಿನಲ್ಲಿ 298 ಯೋಜನೆಗಳಿಗೆ ಹೆಸರು ಇಟ್ಟಿದ್ದಿರಿ ಎಂದು ಟೀಕಿಸಿದರು.
ಮೋದಿ ಸರ್ಕಾರ ಬಂದ ಮೇಲೆ ದೇಶದಲ್ಲಿ ಕಣ್ಣಿಗೆ ಕಾಣುವ ಅಭಿವೃದ್ಧಿ ಆಗಿದೆ. ಮೋದಿ ಅವರ ನಾಯಕತ್ವವನ್ನು ಬಸವರಾಜ್ ಹೊರಟ್ಟಿ ಅವರು ಒಪ್ಪಿದ್ದಾರೆ. ಹೊಸ ಶಿಕ್ಷಣ ನೀತಿಯಲ್ಲಿ ಹೊಸ ಕೌಶಲ್ಯದಲ್ಲಿ ವಿದ್ಯಾರ್ಥಿಗಳಿಗೆ ತಯಾರಿ ಮಾಡಬೇಕು. ಈಗ ಸರ್ವ ಸಮ್ಮತ ಇರುವ ಪಾಲಿಸಿ ಅದು. ನಾವು ಎನ್ಇಪಿ ತರುವಲ್ಲಿ ಆಂದೋಲನದ ರೀತಿಯಲ್ಲಿ ಕೆಲಸ ಮಾಡುತಿದ್ದೇವೆ ಎಂದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಧಿಕೃತವಾಗಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಹಲವಾರು ಚುನಾವಣೆಯಲ್ಲಿ ಬಿಜೆಪಿ ಹಾಗೂ ಹೊರಟ್ಟಿ ವಿರುದ್ಧ ಚುನಾವಣೆ ನಡೆಯುತ್ತಿತ್ತು. ಈ ಬಾರಿ ಹೊರಟ್ಟಿ ಅವರು ಬಿಜೆಪಿಗೆ ಸೇರಿರೊದರಿಂದ ಹೆಚ್ಚಿನ ಶಕ್ತಿ ಪಡೆದಿದೆ. ಎಂಟನೇ ಬಾರಿ ಗೆಲ್ಲುವ ಮೂಲ ಹೊಸ ದಾಖಲೆ ನಿರ್ಮಾಣ ಮಾಡುತ್ತಾರೆ ಎಂದರು.