ಧಾರವಾಡ: ಕೊರೊನಾ ನಂಬರ್ ಜಾಸ್ತಿಯಾದ್ರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಸರ್ಕಾರಗಳು ತಮ್ಮ ಕೆಲಸ ಮಾಡುತ್ತಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಕೊರೊನಾ ನಂಬರ್ ಜಾಸ್ತಿಯಾದ್ರೂ ಆತಂಕ ಬೇಡ: ಕೇಂದ್ರ ಸಚಿವ ಪಹ್ಲಾದ್ ಜೋಶಿ - ಸಚಿವ ಮಾಧುಸ್ವಾಮಿ
ಜನರು ಕೊರೊನಾ ನಿಯಂತ್ರಣ ಮಾಡಬೇಕು ಹಾಗೂ ಜಾಗೃತಿಯನ್ನ ಮೂಡಿಸಬೇಕು. ಮಾಸ್ಕ್ ಹಾಕಿಕೊಳ್ಳುವುದರಿಂದ ಇದನ್ನ ದೊಡ್ಡ ಪ್ರಮಾಣದಲ್ಲಿ ತಡೆಗಟ್ಟಬಹುದು ಎಂದು ಜೋಶಿ ತಿಳಿಸಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ವ್ಯವಸ್ಥೆ ಹಾಗೂ ಜನ ಸಂದಣಿಯನ್ನ ಹೋಲಿಸಿದರೆ ಇಲ್ಲಿವರೆಗೆ ಕೊರೊನಾ ನಿಯಂತ್ರಣದಲ್ಲಿದೆ. ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿರುವುದು ಆತಂಕಾರಿಯಾಗಿದೆ. ಜನರು ಇದನ್ನ ನಿಯಂತ್ರಣ ಮಾಡಬೇಕು ಹಾಗೂ ಜಾಗೃತಿಯನ್ನ ಮೂಡಿಸಬೇಕು. ಮಾಸ್ಕ್ ಹಾಕಿಕೊಳ್ಳುವುದರಿಂದ ಇದನ್ನ ದೊಡ್ಡ ಪ್ರಮಾಣದಲ್ಲಿ ತಡೆಗಟ್ಟಬಹುದು ಎಂದು ಹೇಳಿದರು.
ಇದೇ ಸಚಿವ ಮಾಧುಸ್ವಾಮಿ ಕೊರೊನಾ ನಿಯಂತ್ರಣ ತಪ್ಪಿದೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅವರ ಹೇಳಿಕೆಯನ್ನು ಮಾಧ್ಯಮದಲ್ಲಿ ನೋಡಿದ್ದೇನೆ. ಆದರೆ ಅದು ಸರಿಯಲ್ಲ ಎಂದು ತಿಳಿಸಿದರು.