ಕರ್ನಾಟಕ

karnataka

ETV Bharat / state

ಸಂಸತ್ ಭದ್ರತಾ ಲೋಪ; ಪ್ರಜಾಪ್ರಭುತ್ವದ ಮಂದಿರಕ್ಕೆ ಕಳಂಕ ತರಲು ಮಾಡಿರುವ ಕೃತ್ಯ: ಸಚಿವ ಪ್ರಹ್ಲಾದ್​ ಜೋಶಿ - ಭಾರತದ ಪ್ರಜಾಪ್ರಭುತ್ವ

ಸಂಸತ್ ಭದ್ರತಾ ಲೋಪದ ಕುರಿತು ಯಾರೂ ರಾಜಕೀಯ ಮಾಡಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಮನವಿ ಮಾಡಿದ್ದಾರೆ.

union-minister-prahlad-joshi-reaction-on-parliament-security-breachEtv Bharat
ಸಂಸತ್ ಭದ್ರತಾ ಲೋಪವು ಯೋಜಿತ ಮತ್ತು ವ್ಯವಸ್ಥಿತವಾಗಿದೆ: ಸಚಿವ ಪ್ರಹ್ಲಾದ್​ ಜೋಶಿ

By ETV Bharat Karnataka Team

Published : Dec 16, 2023, 4:41 PM IST

ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಪ್ರತಿಕ್ರಿಯೆ

ಹುಬ್ಬಳ್ಳಿ: ''ಸಂಸತ್ ಭದ್ರತಾ ಲೋಪದ ಪ್ರಕರಣದ ಹಿನ್ನೆಲೆ ನೋಡಿದರೆ ಇದು ಯಾರೋ ಕಿಡಿಗೇಡಿಗಳು ಮಾಡಿದ್ದಲ್ಲ. ಇದನ್ನು ಯೋಜಿತವಾಗಿ ಮತ್ತು ವ್ಯವಸ್ಥಿತವಾಗಿ ಭಾರತದ ಪ್ರಜಾಪ್ರಭುತ್ವಕ್ಕೆ, ಪ್ರಜಾಪ್ರಭುತ್ವದ ಮಂದಿರಕ್ಕೆ ಕಳಂಕ ತರುವುದಕ್ಕೆ ಈ ರೀತಿ ಮಾಡಿದ್ದಾರೆ'' ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, "ಸಂಸತ್ ಭದ್ರತಾ ಲೋಪದ ಕುರಿತು ರಾಜಕೀಯ ಮಾಡಬಾರದು ಎಂದು ಸಂಸದೀಯ ವ್ಯವಹಾರಗಳ ಸಚಿವನಾಗಿ ಸಂಸತ್ತಿನ ಒಳಗೆ ಮತ್ತು ಹೊರಗೆ ಮನವಿ ಮಾಡಿದ್ದೇನೆ" ಎಂದು ಹೇಳಿದರು.

"ಕಳೆದ ಎರಡು ದಿನಗಳಿಂದ ವಿಪಕ್ಷಗಳು ಸದನ ನಡೆಯಲು ಅವಕಾಶ ಮಾಡಿಕೊಟ್ಟಿಲ್ಲ. ನಾವು ಈ ಹಿಂದೆ ನಡೆದ ಘಟನೆಗಳನ್ನು ಹೋಲಿಕೆ ಮಾಡಿ ಸಮರ್ಥನೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆತಂಕವಾದ ಮತ್ತು ಭಯೋತ್ಪಾದನೆಯನ್ನು ಸಹಿಸುವುದಿಲ್ಲ. ಸಂಸತ್​ ಸಂಪೂರ್ಣವಾಗಿ ಸ್ಪೀಕರ್​ ಅವರ ಅಧೀನಕ್ಕೆ ಬರುತ್ತದೆ. ಸ್ಪೀಕರ್​ ಇದನ್ನು ಸ್ಪಷ್ಟಪಡಿಸಿದ್ದಾರೆ" ಎಂದು ತಿಳಿಸಿದರು.

"ಈ ಹಿಂದೆ ಸಾಕಷ್ಟು ಪ್ರಕರಣಗಳು ನಡೆದಿವೆ. ಕಿಡಿಗೇಡಿಗಳು ಪಿಸ್ತೂಲ್ ಮತ್ತು ಡ್ರ್ಯಾಗರ್ ತೆಗೆದುಕೊಂಡು ಸಂಸತ್ತಿಗೆ ಬಂದಿದ್ದರು. ಒಂದೇ ವ್ಯಕ್ತಿ ಎರಡು ದಿನ ಒಂದೇ ಪಾಸ್​ನಲ್ಲಿ ಸಂಸತ್​ ಪ್ರವೇಶಿಸಿದ್ದ. ಇದಕ್ಕೆ ಯಾವ ಎಂಪಿ ಪಾಸ್ ನೀಡಿದ್ದರು ಎಂಬುದು ಸಹ ಗೊತ್ತಿದೆ. ಆದರೆ, ಇದನ್ನು ನಾವು ಮಾತನಾಡುವುದಿಲ್ಲ. ಇದನ್ನು ರಾಜಕೀಯ ಮಾಡಬಹುದು, ಕಟುವಾಗಿ ಕಾಂಗ್ರೆಸ್ ಅನ್ನು ಟೀಕಿಸಬಹುದು. ಆದರೆ, ನಾವು ಇದನ್ನು ಮಾಡಲ್ಲ. ಮುಂದೆ ಇಂತಹ ಘಟನೆ ನಡೆಯದಂತೆ ಕಠಿಣ ಕ್ರಮಕ್ಕೆ ಚಿಂತನೆ ನಡೆದಿದೆ" ಎಂದರು.

ಇದನ್ನೂ ಓದಿ:ಸಂಸತ್​ನಲ್ಲಿ ಭದ್ರತಾ ಲೋಪ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಿ.. ಸುಂದರೇಶ್ ಆಗ್ರಹ

ಕೇಂದ್ರದ ಭದ್ರತಾ ಲೋಪದಿಂದ ಸಂಸತ್ ಭವನದ ಮೇಲೆ ದಾಳಿ - ಸಚಿವ ಜಮೀರ್: ಮತ್ತೊಂದೆಡೆ, ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸಚಿವ ಜಮೀರ್ ಅಹ್ಮದ್, "ಕಿಡಿಗೇಡಿಗಳು ಪ್ರೇಕ್ಷಕರ ಗ್ಯಾಲರಿ ಮೇಲಿಂದ ಜಂಪ್ ಮಾಡಿದ್ದಾರೆ. ಹೀಗಾದರೆ ಅಲ್ಲಿ ಸೆಕ್ಯೂರಿಟಿ ವ್ಯವಸ್ಥೆ ಹೇಗಿದೆ?, ಸಂಸತ್‌ನಲ್ಲಿ ಒಳಗೆ ಹೋಗಲು ಹತ್ತಾರು ಪ್ರಕ್ರಿಯೆಗಳಿವೆ. ಮಂತ್ರಿ, ಎಂಎಲ್‌ಗಳೂ ಸಂಸತ್‌ಗೆ ಹೋಗಲು ಅನೇಕ ಪ್ರಕ್ರಿಯೆಗಳಿವೆ. ಹಾಗಾದರೆ, ಆ ಹುಡುಗ ಹೇಗೆ ಒಳ ಹೋದ?, ಸಿಎಂ ಕೂಡಾ ಪ್ರಧಾನಿಯನ್ನು ಭೇಟಿಯಾಗಬೇಕಾದರೂ ಅನೇಕ ಪ್ರಕ್ರಿಯೆಗಳಿವೆ. ನಾನು ಸಚಿವನಾಗಿ ನನಗಿನ್ನೂ ಲೋಕಸಭೆಗೆ ಹೋಗಲಾಗಿಲ್ಲ. ಹಾಗಾದರೆ ಆತ ಹೇಗೆ ಹೋದ?. ಇದರಲ್ಲಿ‌ ಭದ್ರತಾ ವೈಫಲ್ಯವಾಗಿದೆ ಎಂದು ಹೇಳಿದ್ದರು.

ABOUT THE AUTHOR

...view details