ಕರ್ನಾಟಕ

karnataka

ETV Bharat / state

ಕೇಂದ್ರ ಸಚಿವ ಜೋಶಿ ಮಾನಹಾನಿ ಕೇಸ್.. ಸಾಮಾಜಿಕ ಹೋರಾಟಗಾರ ಹಿರೇಮಠಗೆ ಹಿನ್ನಡೆ - ಧಾರವಾಡ ಜೆಎಂಎ‌ಫ್‌ಸಿ ನ್ಯಾಯಾಲಯ

ನನ್ನನ್ನು ಪ್ರಕರಣದಿಂದ ಕೈಬಿಡಬೇಕು ಎಂದು ಕೋರಿ ಎಸ್​ ಆರ್​ ಹಿರೇಮಠ ಮತ್ತೊಂದು ಅರ್ಜಿಯನ್ನು ಜೆಎಂಎಫ್​ಸಿ ನ್ಯಾಯಾಲಯಕ್ಕೆ ಸಲ್ಲಿದ್ದರು. ನಿನ್ನೆ ನಡೆದ ಅರ್ಜಿ ವಿಚಾರಣೆಯಲ್ಲಿ ನ್ಯಾಯಾಲಯ ಎಸ್​ ಆರ್​ ಹಿರೇಮಠ ಅವರ ಅರ್ಜಿಯನ್ನು ವಜಾ ಮಾಡಿದೆ.

Union Minister Pralhad Joshi and SR Hiremath
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಎಸ್ ಆರ್ ಹಿರೇಮಠ

By

Published : Oct 8, 2022, 7:49 PM IST

ಧಾರವಾಡ: 2015ರಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಮಾಡಿದ ಮಾನಹಾನಿ ಹಿನ್ನೆಲೆ ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ ಅವರಿಗೆ ನ್ಯಾಯಾಲಯದಲ್ಲಿ ಹಿನ್ನೆಡೆಯಾಗಿದೆ. ಹಿರೇಮಠ ಅವರು ಧಾರವಾಡ ಜೆಎಂಎ‌ಫ್‌ಸಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.

2015ರಲ್ಲಿ ಪ್ರಹ್ಲಾದ್​​ ಜೋಶಿ ಧಾರವಾಡದ ಮಾಜಿಕ ಹೋರಾಟಗಾರ ಎಸ್​ ಆರ್​ ಹಿರೇಮಠ ಎನ್ನುವವರು ಪತ್ರಿಕೆಗಳಲ್ಲಿ ಹಾಗೂ ಸಾರ್ವಜನಿಕವಾಗಿ ಚುನಾವಣಾ ಸಂದರ್ಭದಲ್ಲಿ ಮತ್ತು ಅದಕ್ಕೂ ಮೊದಲು ಇಲ್ಲಸಲ್ಲದ ಆರೋಪಗಳನ್ನು ಮಾಡಿ, ತಮ್ಮ ಮಾನಹಾನಿಗೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಧಾರವಾಡ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.

ಆ ದೂರಿನನ್ವಯ ವಿಚಾರಣೆ ವೇಳೆ ಸಾಕ್ಷಿಗಳು ಸೇರಿದಂತೆ ಎಸ್​ ಆರ್​ ಹಿರೇಮಠ ಅವರೂ ಹಾಜರಾಗಿ, ಜಾಮೀನು ಪಡೆದಿದ್ದರು. ನಂತರ ಎಸ್​ ಆರ್​ ಹಿರೇಮಠ ಅವರು ತಮ್ಮ ವಿರುದ್ಧ ಕೇಸ್​ ನಡೆಯದಂತೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಹೈಕೋರ್ಟ್​ ತಿರಸ್ಕರಿಸಿ ಕೆಳ ನ್ಯಾಯಾಲಯಕ್ಕೆ ವಾಪಸ್​ ಕಳುಹಿಸಿತ್ತು.

ಹುಬ್ಬಳ್ಳಿ ಜಿಮ್ಖಾನ್ ಮೈದಾನ ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಹಾಗೂ ಪ್ರಹ್ಲಾದ್​ ಜೋಶಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಇವರು ಭೂಗಳ್ಳರು ಅಂಬ ಪದ ಬಳಸಿ ಸಾಮಾಜಿಕ ಹೋರಾಟಗಾರ ಎಸ್​ ಆರ್​ ಹಿರೇಮಠ ನಿರಂತರವಾಗಿ ಸಾರ್ವಜನಿಕವಾಗಿ ಸುಳ್ಳು ಆರೋಪ ಮಾಡುತ್ತಿದ್ದರು.

ಅದಲ್ಲದೇ ಪ್ರಹ್ಲಾದ್​​​ ಜೋಶಿ ಅವರ ಹೆಸರನ್ನು ಸೇರಿಸಿ ಭ್ರಷ್ಟರ ಪಟ್ಟಿ ಎಂದು ಬಿಡುಗಡೆ ಮಾಡಿದ್ದರು. ಅದರಲ್ಲಿ ಒಂದಿಂಚು ಭೂಮಿಯನ್ನೂ ನಾವು ಪಡೆದಿಲ್ಲ. ಆ ಭೂಮಿ ಸಾರ್ವಜನಿಕ ಆಸ್ತಿ ಅಲ್ಲ. ಅದು ಒಂದು ಖಾಸಗಿ ಕ್ಲಬ್​ಗೆ ಸೇರಿದ ಜಾಗ ಎಂದು ಸುಳ್ಳು ಆರೋಪವನ್ನು ಅಲ್ಲಗಳೆದು, ತಮ್ಮ ಮಾನಹಾನಿ ಮಾಡಿದ್ದಕ್ಕೆ ಜೋಶಿ ಅವರು ಮತ್ತೆ ಅರ್ಜಿ ಹಾಕಿದ್ದರು.

ಅವುಗಳನ್ನು ನಾನು ಸಾರ್ವಜನಿಕ ಹಿತಾಸಕ್ತಿಗಾಗಿ ಹೇಳಿದ್ದೇನೆ. ಅದರಲ್ಲಿ ಯಾವುದೇ ಮಾನಹಾನಿ ಮಾಡುವ ಉದ್ದೇಶ ಇರಲಿಲ್ಲ. ನನ್ನನ್ನು ಪ್ರಕರಣದಿಂದ ಕೈಬಿಡಬೇಕು ಎಂದು ಕೋರಿ ಎಸ್​ ಆರ್​ ಹಿರೇಮಠ ಮತ್ತೊಂದು ಅರ್ಜಿಯನ್ನು ಜೆಎಂಎಫ್​ಸಿ ನ್ಯಾಯಾಲಯಕ್ಕೆ ಸಲ್ಲಿದ್ದರು. ನಿನ್ನೆ ನಡೆದ ಅರ್ಜಿ ವಿಚಾರಣೆಯಲ್ಲಿ ನ್ಯಾಯಾಲಯ ಎಸ್​ ಆರ್​ ಹಿರೇಮಠ ಅವರ ಅರ್ಜಿ ವಜಾ ಮಾಡಿದೆ. ಕೇಸ್ ಮುಂದುವರಿಸಲು ನ್ಯಾಯಾಲಯ ಸೂಚಿಸಿದೆ.

ಇದನ್ನೂ ಓದಿ:ಬಾಗ್ಮನೆ ಟೆಕ್​ಪಾರ್ಕ್​ ಒತ್ತುವರಿ ಪ್ರಕರಣ: ಲೋಕಾಯುಕ್ತ ವಿಚಾರಣೆಗೆ ಹೈಕೋರ್ಟ್ ತಡೆ, ಪ್ರತಿವಾದಿಗಳಿಗೆ ನೋಟಿಸ್

ABOUT THE AUTHOR

...view details