ಕರ್ನಾಟಕ

karnataka

ETV Bharat / state

ವಿದೇಶಾಂಗ ನೀತಿಯ ಸ್ಥಿತಿಗತಿ ಬಗ್ಗೆ ವಿದ್ಯಾರ್ಥಿಗಳ ಜೊತೆ ಕೇಂದ್ರ ಸಚಿವ ಜೈಶಂಕರ್ ಸಂವಾದ

ಪ್ರಧಾನಿ ಮೋದಿ ಅವರು ದೇಶದ ಚುಕ್ಕಾಣಿ ಹಿಡಿದ ಮೇಲೆ ಇಡೀ ಜಗತ್ತು ಭಾರತದ ಕಡೆ ನೋಡುವ ದೃಷ್ಠಿ ಬದಲಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ್ ಅವರು ತಿಳಿಸಿದ್ದಾರೆ.

ಧಾರವಾಡ ಜೆಎಸ್ಎಸ್ ಸನ್ನಿಧಿ ಕಲಾಕ್ಷೇತ್ರ
ಧಾರವಾಡ ಜೆಎಸ್ಎಸ್ ಸನ್ನಿಧಿ ಕಲಾಕ್ಷೇತ್ರ

By

Published : Apr 2, 2023, 8:45 PM IST

ಕೇಂದ್ರ ವಿದೇಶಾಂಗ ಸಚಿವ ಜೈ ಶಂಕರ್ ಅವರು ಮಾತನಾಡಿದರು

ಧಾರವಾಡ : ವಿದೇಶಾಂಗ ಸಚಿವರು ಕೊನೆಗೆ ಧಾರವಾಡಕ್ಕೆ ಯಾವಾಗ ಭೇಟಿ‌ ನೀಡಿದ್ರು ಗೊತ್ತಿಲ್ಲ, ಚಿಕ್ಕೋಡಿಯಲ್ಲಿ ನನ್ನ ತರಬೇತಿ ನಡೆದಿದ್ದು, ನಾನು ವಿದೇಶಾಂಗ ನೀತಿ ಬಗ್ಗೆ ಹೇಳಬಯಸಿದ್ದೇನೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್​ ಜೈಶಂಕರ್ ಹೇಳಿದರು.

ಧಾರವಾಡ ಜೆಎಸ್ಎಸ್ ಸನ್ನಿಧಿ ಕಲಾಕ್ಷೇತ್ರದಲ್ಲಿ ನಡೆದ ಭವಿಷ್ಯದ ಸವಾಲುಗಳು, ವಿದೇಶಾಂಗ ನೀತಿಯ ಸ್ಥಿತಿಗತಿ ಬಗ್ಗೆ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಮಸ್ಕಾರ ಸಹೋದರ ಸಹೋದರಿಯರೇ ಎಂದು ಭಾಷಣ ಆರಂಭಿಸಿದರು. ಜನವರಿ 2020 ರಲ್ಲಿ ಕೋವಿಡ್​ ಬಂದಿತ್ತು. ಮುಂದೆ ಏನಾಗಬಹುದು ಎಂದು ಯಾರಿಗೂ ಗೊತ್ತಿರಲಿಲ್ಲ ಎಂದು ಕೊರೊನಾ ಕರಿನೆರಳಿನ ಬಗ್ಗೆ ಹೇಳಿದರು.

ಉಕ್ರೇನ್​ನಲ್ಲಿ ಯುದ್ಧ ನಡೆದಾಗ ಕೂಡಾ ನಮ್ಮ ದೇಶದ ಜನರ ಬಗ್ಗೆ ಭಯ ಆಗಿದ್ದು, ಆಗ ಅಲ್ಲಿರುವ ಭಾರತೀಯರನ್ನು ದೇಶಕ್ಕೆ ಹೇಗೆ ತರಬೇಕು ಎಂಬ ಬಗ್ಗೆ ಚಾಲೆಂಜ್ ‌ಇತ್ತು. ಮೋದಿ ಅವರು ಐವರು ಕೇಂದ್ರ ಸಚಿವರನ್ನು ನೇಮಕ‌ ಮಾಡಿದ್ರು. ತೈಲದ ಬೆಲೆ ಏರಿಕೆ ನಡುವೆ ಯುದ್ಧ ನಡೆದಿತ್ತು. ಆಗ ಎಲ್ಲದರ ಏರಿಕೆ ಆಗಿದ್ದವು ಎಂದು ಅಂದಿನ ಕ್ಷಣಗಳನ್ನು ಮೆಲುಕು ಹಾಕಿದರು.

ಗೋಧಿ ರಫ್ತು ಮಾಡುವ ದೇಶ ಉಕ್ರೇನ್ ಜಗತ್ತಿನಲ್ಲಿ ಏನು‌ ನಡಿದಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ನಮ್ಮ 3 ಕೋಟಿಗೂ ಹೆಚ್ಚು ಜನ ವಿದೇಶದಲ್ಲಿ ಇದ್ದಾರೆ. ಅವರು ಅಭ್ಯಾಸ ಮಾಡಲು, ಕೆಲಸಕ್ಕೆ ಹೋಗಿದ್ದಾರೆ‌. ಭಾರತೀಯರು ಎಲ್ಲಿ ಬೇಕಾದರಲ್ಲಿ ಇವತ್ತು ವಾಸವಾಗಿದ್ದಾರೆ. ನಾನು ವಿದೇಶಾಂಗ ಸಚಿವ‌ ಇರುವುದರಿಂದ ಹೊರ ದೇಶಗಳಿಗೆ ಓಡಾಡುವ ಕೆಲಸ ಮಾಡ್ತೇನೆ. ನಾನು ಹೊರಗೆ ಹೋದಾಗ ಬಹಳಷ್ಟು ಜನ ನಮ್ಮ ಬಗ್ಗೆ ಮಾತಾಡ್ತಾರೆ. ನಮ್ಮ ದೇಶದ ಬಗ್ಗೆ ಅವರು ಕೇಳಿದಾಗ ನಾನು ಒಂದೇ ಉತ್ತರ ಕೊಡ್ತೇನೆ. ಅದು ಮೋದಿ, ಮೋದಿ 9 ವರ್ಷದಲ್ಲಿ ಏನು ಮಾಡಿದರು ಎನ್ನುವವರಿಗೆ ನಾನು ಉತ್ತರ ಹೇಳ್ತೇನೆ ಎಂದರು.

ರಕ್ಷಣಾ ವಿಚಾರದಲ್ಲಿ ನಾವು ಮುಂದೆ ಬಂದಿದ್ದೇವೆ: ವಿಶ್ವ ಆರ್ಥಿಕ ಸ್ಥಿತಿ‌ ಬಗ್ಗೆ ಹೋರಾಟ ನಡೆಸಿದೆ. ಆದರೆ‌ ನಾವು ಆರ್ಥಿಕವಾಗಿ ಮೇಲೆ ಬರುತ್ತಿದ್ದೇವೆ. 5 ವರ್ಷದಲ್ಲಿ ನಾವು 142 ದಿಂದ 63ನೇ ಸ್ಥಾನಕ್ಕೆ ಬಂದಿದ್ದೇವೆ. ದೇಶಿ ವಸ್ತುಗಳ ಬಗ್ಗೆ ನಾವು ಹೆಚ್ಚು ಗಮನ ಹರಿಸಬೇಕು. 2015 ರಲ್ಲಿ ಕಡಿಮೆ ವಿವಿಗಳಿದ್ದವು. ಈಗ ಅದು ಡಬಲ್ ಆಗಿವೆ. ಕಳೆದ ವರ್ಷದ ನಾವು ರಫ್ತು ಹೆಚ್ಚು ಮಾಡಿದ್ದೇವೆ. ಇದು ಕೇವಲ ರಫ್ತು ಅಲ್ಲ, ನಾವು ಮಾಡಿದ ಸಾಧನೆ. ರಕ್ಷಣಾ‌ ವಿಚಾರದಲ್ಲಿ ನಾವು ಬಹಳ ಮುಂದೆ ಬಂದಿದ್ದೇವೆ. ದೇಶ ಡಿಜಿಟಲ್ ಮಾಡಲು ಹೊರಟಿದ್ದೇವೆ ಎಂದು ಹೇಳಿದರು.

80 ಕೋಟಿ ಜನ ಇಂಟರ್​ನೆಟ್ ಬಳಸುತ್ತಿದ್ದೇವೆ. 100 ಕೋಟಿ ಜನ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಕೋವಿಡ್​ ವೇಳೆ ಬಹಳ ಕಷ್ಟ ಆಗಿತ್ತು. ಇದು ವಿಶ್ವಕ್ಕೆ ಆವರಿಸಿತ್ತು. ಪ್ರಧಾನಿ ಈ ಬಗ್ಗೆ ಸಭೆ ಮಾಡಿದಾಗ ನಾನು ಅವರ ಹಿಂದೆ ಕುಳಿತಿದ್ದೆ‌. ಆಗ ಸಭೆಯಲ್ಲಿ ಹೇಗೆ ಇದನ್ನು ತಡೆಯಬೇಕು ಎಂದು ಚರ್ಚೆ ಬಂದಾಗ ದೊಡ್ಡ ಚಾಲೆಂಜ್ ಇತ್ತು. ಆ ವೇಳೆ ಬಹಳ ಜನ ಕೆಲಸ ಕಳೆದುಕೊಂಡರು. ಮೋದಿ ಆಗ ಹಿಂದೆ ಬಂದ ರೋಗದ ಬಗ್ಗೆ ತಿಳಿ‌ ಹೇಳುತ್ತ ಜನ ಧನ ಯೋಜನೆ ತಂದರು. 48 ಕೋಟಿ ಜನ ಇದರ ಲಾಭ ಪಡೆದರು ಎಂದರು.

ಭಾರತೀಯರ ಕಡೆ ಹೆಚ್ಚು ಪ್ರತಿಭೆ ಇದೆ: ಆವಾಸ್ ಯೋಜನೆಯಲ್ಲಿ 13 ಕೋಟಿ ಜನ ಇದರ ಲಾಭ ಪಡೆದರು. ಜನ ಆರೋಗ್ಯ ಯೋಜನೆಯಲ್ಲಿ ಜನ ಲಾಭ ಪಡೆದರು. ಅನ್ನ ಯೋಜನೆಯಲ್ಲಿ 80 ಕೋಟಿ ಜನ ಲಾಭ ಪಡೆದರು. ಏನು ಕಷ್ಟ ಇಲ್ಲದೆ ಇದನ್ನ ಪಡೆದರು. ಕರ್ನಾಟಕ ರಾಜ್ಯ ಸ್ಟಾರ್ಟಪ್​ನಲ್ಲಿ ಮುಂದಿದೆ. ಅಲ್ಲದೇ ಹಲವು ಕ್ಷೇತ್ರದಲ್ಲಿ ಮುಂದಿದೆ. ಎಲೆಕ್ಟ್ರಾನಿಕ್ಸ್​ ಹಬ್ ಆಗಲು ಭಾರತ ತಯಾರಿದೆ. ಭಾರತೀಯರ ಕಡೆ ಹೆಚ್ಚು ಪ್ರತಿಭೆ ಇದೆ. ಅಭಿವೃದ್ಧಿ ಪಡೆದ ರಾಷ್ಟ್ರಗಳು ಕೂಡಾ ವ್ಯಾಕ್ಸಿನ್ ನಮ್ಮ ಕಡೆ ಪಡೆದರು. ಆಪರೇಷನ್​ ಗಂಗಾ, ಒಂದೇ ಭಾರತ‌ ಮಿಷನ್ ಉಕ್ರೇನ್​ದಿಂದ ನಾವೇ ಹೆಚ್ಚು ಜನರನ್ನು ತಂದಿದ್ದು, 90 ವಿಮಾನದಲ್ಲಿ ಜನರನ್ನು ತಂದಿದ್ದೆವೆ ಎಂದು ಕೇಂದ್ರದ ಸಾಧನೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಕೆಲ‌‌ ರಾಷ್ಟ್ರಗಳು ಒಂದು ಅಥವಾ ಎರಡು ವಿಮಾನ ಮಾತ್ರ ಕಳಿಸಿ‌ ತಮ್ಮ‌ ಜನರನ್ನು ಕರೆಸಿದ್ರು. ಜಿ 20 ರಾಷ್ಟ್ರಗಳಲ್ಲಿ ಭಾರತ ಕೇವಲ ಜಿ 20 ಬಗ್ಗೆ ಮಾತ್ರ ವಿಚಾರ ಮಾಡದೇ ಇಡೀ ವಿಶ್ವದ ವಿಚಾರ ಮಾಡುತ್ತಿದೆ. ತೈಲ ಆಮದಿಗಾಗಿ ರಷ್ಯಾದ ಜೊತೆ ಮಾತು‌ಕತೆ ನಡೆಸಿದೆ. ನಮ್ಮ ಸೈನ್ಯ ಕೂಡಾ ‌ಚೀನಾ ಗಡಿಯಲ್ಲಿ ಹೆಚ್ಚು ಸೈನಿಕರಿಗೆ ಏಟು ಹಾಕಿದೆ. ಬಾಲಾಕೋಟ್ ಹಾಗೂ 26/11 ನಂತರದ ದೊಡ್ದ ಘಟನೆಯಾಗಲು ಬಿಡಲಿಲ್ಲ. ಬಹಳ ಹಳೆಯ ನಾಗರಿಕತೆ ಇದ್ದವರು. ಧಾರವಾಡ ಸಾಂಸ್ಕೃತಿಕ ನಗರಿ, ಹಿಂದಿನಿಂದಲೂ ಇದು ವಿದ್ಯೆಗೆ ಹೆಚ್ಚಿನ ಒತ್ತು ಕೊಟ್ಟಿದೆ. ಆಯುರ್ವೇದ ಕಡೆ ಸ್ವಲ್ಪ ಹೆಚ್ಚು ಗಮನ ಕೊಡಬೇಕು. ಕೋವಿಡ್ ವೇಳೆ ಹಲವರು ಇದನ್ನ ತಮ್ಮಷ್ಟಕ್ಕೆ ತಾವೇ ಅಳವಡಿಸಿಕೊಂಡಿದ್ದರು ಎಂದು ಜೈಶಂಕರ್​ ತಿಳಿಸಿದರು.

ಭಾರತ ಒಂದು ಶಕ್ತಿ ಎನ್ನುವುದನ್ನು ಮೋದಿ ತಂದರು: ಶಾಸಕ ಅರವಿಂದ ಬೆಲ್ಲದ್​ ಮಾತನಾಡಿ, 2014 ಮೋದಿ ದೇಶದ ಚುಕ್ಕಾಣಿ ಹಿಡಿದ ಮೇಲೆ ಇಡೀ ಜಗತ್ತು ಭಾರತದ ಕಡೆ ನೋಡುವ ದೃಷ್ಟಿ ಬದಲಾಗಿದೆ. ದೈತ್ಯ ಹೆಜ್ಜೆಗಳನ್ನು ಮೋದಿ ಇಡುತ್ತಿದ್ದಾರೆ. ಭಾರತ ಒಂದು ಶಕ್ತಿ ಎನ್ನುವುದನ್ನ ಮೋದಿ ತಂದರು. ಭಾರತದ ಬಗ್ಗೆ ತಪ್ಪು ಕಲ್ಪನೆಗಳಿದ್ದವು. ರೈತರಿಗೆ ರಿಯಾಯಿತಿ ಕೊಡಬಾರದು ಅಂತ ಇತ್ತು. ಅವರ ಉದ್ದೇಶ ರೈತರ ಬೆಳೆ ಕುಂಠಿಸಬೇಕು ಅನ್ನೋದು ವಿದೇಶದ ನೀತಿ ಇತ್ತು. ವಿದೇಶದ ನೀತಿಗೆ ಇಲ್ಲಿಯವರು ಸಹ ಸರಿ ಎನ್ನುವ ಸ್ಥಿತಿ ಇತ್ತು. ಮೋದಿ ಬಂದಮೇಲೆ ಆ ನೀತಿಗಳಲ್ಲೇ ಬದಲಾಗಿದೆ ಎಂದು ಹೇಳಿದರು.

2014ರಲ್ಲಿ ಅಮೆರಿಕಕ್ಕೆ ಹೋದಾಗ ಭವ್ಯ ಸ್ವಾಗತ ಸಿಕ್ಕಿತು. ಅಲ್ಲಿಂದ ಒಂದು ಹೊಸತನ ಆರಂಭವಾಯಿತು. ಮೆಡಿಸನ್ ಸ್ಕ್ವೆರ್ ನಲ್ಲಿ ಪ್ರಧಾನಿಗೆ ಸಿಕ್ಕ ಗೌರವಕ್ಕೆ ಕಾರಣವೇ ಜೈಶಂಕರ್ ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ಕೊಡುವುದು ಹೋಗಿದೆ. ಈಗ ಒಂದು ಕೆನ್ನೆಗೆ ಹೊಡೆದರೆ ಕೈ ಕಡಿಯುವುದನ್ನ ಮೋದಿ ತೋರಿಸಿದ್ದಾರೆ. ಭ್ರಮಾ ಲೋಕದಲ್ಲಿ ಇದ್ದು ರಾಷ್ಟ್ರವನ್ನು ಈ ಹಿಂದೆ ನಡೆಸಿದ್ದರು. 60 ವರ್ಷಗಳನ್ನ ನಾವು ಇದೇ ರೀತಿ ಕಳೆದುಕೊಂಡಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ :ರಾಜ್ಯ ಸರ್ಕಾರ ಯಾವುದೇ ಕೆಲಸವನ್ನು ಕಾನೂನು ಪ್ರಕಾರ ಮಾಡಲ್ಲ: ಡಿಕೆಶಿ

ABOUT THE AUTHOR

...view details