ಕರ್ನಾಟಕ

karnataka

ETV Bharat / state

ಸಂಶಿ ರೈಲ್ವೆ ನಿಲ್ದಾಣದ ಬಳಿ ಅಪರಿಚಿತನ ಶವ ಪತ್ತೆ - Hubli Railway Station

ಇಲ್ಲಿನ ರೈಲ್ವೆ ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ರೈಲಿಗೆ ಸಿಲುಕಿ ಸಾವನಪ್ಪಿದ್ದು, ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇನ್ನು ಅಪರಿಚಿತನ ಗುರುತು ಪತ್ತೆಯಾಗಿಲ್ಲ.

ಸಂಶಿ ರೈಲ್ವೆ ನಿಲ್ದಾಣದ ಬಳಿ ಅಪರಿಚಿತನ ಶವ ಪತ್ತೆ

By

Published : Sep 9, 2020, 9:27 PM IST

ಹುಬ್ಬಳ್ಳಿ: ಇಲ್ಲಿನ ರೈಲ್ವೆ ಪೊಲೀಸ್ ಠಾಣೆ ಸರಹದ್ದಿನ ಸಂಶಿ ರೈಲ್ವೆ ನಿಲ್ದಾಣದ‌ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸುಮಾರು 30 ರಿಂದ 35 ವರ್ಷದ‌ ಅಪರಿಚಿತ ವ್ಯಕ್ತಿ ರೈಲಿಗೆ ಸಿಕ್ಕು ಮೃತಪಟ್ಟಿದ್ದಾನೆ.

5.6 ಅಡಿ ಎತ್ತರವಿದ್ದು, ಬಲಗೈ ಮಧ್ಯದ ಬೆರಳಲ್ಲಿ ಬಿಳಿ ಮುತ್ತು ಹೊಂದಿರುವ ಉಂಗುರ, ಬಲಗೈ ಅಂಗೈ ಮೆಲ್ಭಾಗದಲ್ಲಿ ಹಚ್ಚೆ, ಎಡಗೈ ಅಂಗೈ ಮೇಲೆ ಚಂದ್ರು ಎಂಬ ಹೆಸರಿನ ಹಚ್ಚೆ ಇರುತ್ತದೆ. ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದೆ. ಅಪರಿಚಿತ ಶವದ ಮಾಹಿತಿ ತಿಳಿದಲ್ಲಿ ಅಥವಾ ವಾರಸುದಾರರು ದೂರವಾಣಿ ಸಂಖ್ಯೆ 0836-2384751 ಹಾಗೂ ಮೊಬೈಲ್ ಸಂಖ್ಯೆ 9480802126 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details