ಧಾರವಾಡ: ಕಳೆದ ಎರಡ್ಮೂರು ದಶಕಗಳಿಂದ ಸ್ವಾಮಿಗಳು ಹಾಗೂ ರಾಜಕಾರಣಿಗಳ ನಡುವೆ ಅಪವಿತ್ರ ಮೈತ್ರಿ ಬೆಳೆಯುತ್ತಿದ್ದು, ಇದು ವಿಪರ್ಯಾಸದ ಸಂಗತಿಯಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ಆರ್ ಹಿರೇಮಠ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಇತ್ತೀಚೆಗೆ ಸ್ವಾಮೀಜಿಯೊಬ್ಬರ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ಇದು ಒಳ್ಳೆ ಬೆಳವಣಿಗೆ ಅಲ್ಲ. ಸಂವಿಧಾನ ಮೌಲ್ಯಗಳಿಗೆ ಇದು ಅಪಾಯಕಾರಿ. ಇಂತಹ ಕೇಸುಗಳನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕು. ಪೊಲೀಸರು ತಡವಾಗಿ ಸ್ವಾಮೀಜಿ ಬಂಧಿಸಿದರು. ಇಂತಹ ಲೋಪಗಳು ಆಗಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.