ಹುಬ್ಬಳ್ಳಿ: ನಿರ್ಮಾಣ ಹಂತದ ಚರ್ಚ್ ಕಟ್ಟಡ ಕುಸಿದು ಬಿದ್ದ ಘಟನೆ ಉಣಕಲ್ ಕೆರೆ ಬಳಿ ನಡೆದಿದೆ.
ನಿರ್ಮಾಣ ಹಂತದ ಚರ್ಚ್ ಕಟ್ಟಡ ಕುಸಿತ.. ದೇವರು ದೊಡ್ಡವನು,, 25ಕ್ಕೂ ಹೆಚ್ಚು ಕಾರ್ಮಿಕರು ಪಾರು.. - ಕಟ್ಟಡದ ಸ್ಲ್ಯಾಬ್
ನಿರ್ಮಾಣ ಹಂತದ ಚರ್ಚ್ ಕಟ್ಟಡ ಕುಸಿದು ಬಿದ್ದ ಘಟನೆ ಹುಬ್ಬಳ್ಳಿ ಉಣಕಲ್ ಕೆರೆ ಬಳಿ ನಡೆದಿದೆ.
ನಿರ್ಮಾಣ ಹಂತದ ಚರ್ಚ್ ಕಟ್ಟಡ ಕುಸಿತ
ನಗರದ ಉಣಕಲ್ ಕೆರೆ ಬಳಿ ಮುಲ್ಲರ್ ಮೆಮೋರಿಯಲ್ ಚರ್ಚ್ ಕಟ್ಟಡದ ಸ್ಲ್ಯಾಬ್ ಹಾಕುವ ವೇಳೆ ಅವಘಡ ಸಂಭವಿಸಿದೆ. 25ಕ್ಕೂ ಹೆಚ್ಚು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಟ್ಟಡದ ಮೊದಲ ಮಹಡಿಗೆ ಹಾಕಿದ ಸ್ಲ್ಯಾಬ್ ಕುಸಿದು ಬಿದ್ದಿದೆ. ಮಧ್ಯಾಹ್ನದ ಸಮಯ ಕಾರ್ಮಿಕರು ಊಟಕ್ಕೆ ತೆರಳಿದ ವೇಳೆ ಘಟನೆ ಜರುಗಿದ್ದು, ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ನಿರ್ಮಾಣ ಹಂತದಲ್ಲಿ ಇರುವಾಗ ಸೆಂಟ್ರಿಂಗ್ ಕುಸಿದು ಬಿದಿದೆ. ಮೊದಲ ಮಹಡಿಯ ನಿರ್ಮಾಣ ಹಂತದಲ್ಲಿರುವಾಗ ಈ ಅವಘಡ ಸಂಭವಿಸಿದ್ದು, ಭಾರಿ ಅನಾಹುತವೊಂದು ತಪ್ಪಿದೆ.