ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದಿದೆ.
ತುಂಬಿ ಹರಿಯುತ್ತಿರುವ ಉಣಕಲ್ ಕೆರೆ: ಜನರಲ್ಲಿ ಹೆಚ್ಚಿದ ಆತಂಕ - ತುಂಬಿ ಹರಿಯುತ್ತಿರುವ ಉಣಕಲ್ ಕೆರೆ
ಕಳೆದೆರೆಡು ದಿನಗಳಿಂದ ಹುಬ್ಬಳ್ಳಿ ನಗರದಲ್ಲೂ ಭಾರಿ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಉಣಕಲ್ ಕೆರೆ ತುಂಬಿ ಹರಿಯುತ್ತಿದೆ. ಕೆರೆ ತುಂಬಿ ನೀರು ಹೊರಕ್ಕೆ ಹರಿಯುತ್ತಿರುವುದರಿಂದ ಹಳೇ ಹುಬ್ಬಳ್ಳಿ ಪ್ರದೇಶದ ಜನರಲ್ಲಿ ಆತಂಕ ಶುರುವಾಗಿದೆ.
ತುಂಬಿ ಹರಿಯುತ್ತಿರುವ ಉಣಕಲ್ ಕೆರೆ: ಜನರಲ್ಲಿ ಹೆಚ್ಚಿದ ಆತಂಕ
ಕಳೆದೆರಡು ದಿನಗಳಿಂದ ಹುಬ್ಬಳ್ಳಿ ನಗರದಲ್ಲೂ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ನಗರದ ಉಣಕಲ್ ಕೆರೆ ತುಂಬಿ ಹರಿಯುತ್ತಿದೆ. ಕೆರೆ ತುಂಬಿ ನೀರು ಹೊರಕ್ಕೆ ಹರಿಯುತ್ತಿರುವುದರಿಂದ ಹಳೇ ಹುಬ್ಬಳ್ಳಿ ಪ್ರದೇಶದ ಜನರಲ್ಲಿ ಆತಂಕ ಶುರುವಾಗಿದೆ.
ಕೆರೆಯ ನೀರು ಮನೆಗಳಿಗೆ ನುಗ್ಗಿದ್ರೆ ಹೇಗೆ ಎಂದು ಆತಂಕ ಶುರುವಾಗಿದೆ. ಇಂದು ಕೂಡ ನಗರದಲ್ಲಿ ಬೆಳ್ಳಂ ಬೆಳಗ್ಗೆಯಿಂದಲೇ ಮಳೆ ಮುಂದುವರೆದಿದ್ದು, ತಗ್ಗು ಪ್ರದೇಶದ ಮನೆಗಳ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.