ಧಾರವಾಡ :ಕೊರೊನಾ ವೈರಸ್ ಭೀತಿ ಹಿನ್ನೆಲೆ ದೇಶಾದ್ಯಂತ ಲಾಕ್ಡೌನ್ ಮಾಡಲಾಗಿತ್ತು. ಆದರೆ, ಹಂತ ಹಂತವಾಗಿ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಲಾಕ್ಡೌನ್ ಸಮಯದಲ್ಲಿ ಜನ ಮನೆಯಲ್ಲಿ ಕುಳಿತುಕೊಳ್ಳಲು ಬೇಸರ ಮಾಡಿಕೊಳ್ಳುತ್ತಿದ್ದರು. ಈಗ ಜನ ಕೊರೊನಾ ಭಯವಿಲ್ಲದೇ ಓಡಾಡಿಕೊಂಡಿದ್ದಾರೆ. ಆದರೆ, ಹೊರ ದೇಶದ ಪ್ರಜೆಯೊಬ್ಬ ಹೊರಗೆ ಬರದೇ ತಮ್ಮಷ್ಟಕ್ಕೆ ತಾವೇ ಲಾಕ್ಡೌನ್ ಮಾಡಿಕೊಂಡಿದ್ದಾರೆ.
ಕವಿವಿಯೊಳಗೆ 'ಉಗಾಂಡಾ'ದ ವಿದ್ಯಾರ್ಥಿ ಪಿಹೆಚ್‌ಡಿ ತಪಸ್ಸು.. ಒಬ್ಬಂಟಿ ಜತೆಗೆ ಆಧ್ಯಾತ್ಮಿಕ ಬೆಳಗು!! - Uganda student living alone in Karnataka VV
ವಸತಿ ನಿಲಯದಲ್ಲಿನ ಎಲ್ಲಾ ವಿದ್ಯಾರ್ಥಿಗಳು ಅವರವರ ಜಿಲ್ಲೆಗೆ ತೆರಳಿದ್ದಾರೆ. ಕಳೆದ 3 ತಿಂಗಳಿನಿಂದ ಇವರು ಹಾಸ್ಟೆಲ್ನಲ್ಲಿ ಬಸವಣ್ಣ, ರಾಮಾನುಜಾಚಾರ್ಯ ಅವರ ವಿಚಾರಧಾರೆ ಅಧ್ಯಯನ ಮಾಡುತ್ತಾ, ಒಂಟಿಯಾಗಿ ವಸತಿ ನಿಲಯದಲ್ಲಿ ವಾಸವಿದ್ದಾರೆ..
ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ತತ್ವಶಾಸ್ತ್ರ ವಿಭಾಗದಲ್ಲಿ ಉಗಾಂಡಾ ದೇಶದ ಜಿಯೋಲ್ ಎಂಬ ವಿದ್ಯಾರ್ಥಿಯು ಪಿಹೆಚ್‌ಡಿ ಮಾಡುತ್ತಿದ್ದಾರೆ. ಇವರು ಪ್ರೊ. ಜಾಲಿಹಾಳ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಲಾಕ್ಡೌನ್ ನಂತರ ಇವರಿಗೆ ಕವಿವಿ ಹಾಗೂ ಪ್ರೊ. ಜಾಲಿಹಾಳ ಅವರಿಂದ ದಿನಸಿ ನೀಡಲಾಗಿದೆ. ಸ್ವತಃ ತಾವೇ ಅಡುಗೆ ಮಾಡಿ ಕವಿವಿ ಭೀಮಾ ವಸತಿ ನಿಲಯದಲ್ಲಿ ವಾಸವಾಗಿದ್ದಾರೆ.
ವಸತಿ ನಿಲಯದಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಅವರವರ ಜಿಲ್ಲೆಗೆ ತೆರಳಿದ್ದಾರೆ. ಕಳೆದ ಮೂರು ತಿಂಗಳಿನಿಂದ ಇವರು ಹಾಸ್ಟೆಲ್ನಲ್ಲಿ ಬಸವಣ್ಣ, ರಾಮಾನುಜಾಚಾರ್ಯ ಅವರ ವಿಚಾರಧಾರೆಗಳನ್ನು ಅಧ್ಯಯನ ಮಾಡುತ್ತಾ, ಒಬ್ಬಂಟಿಯಾಗಿ ವಸತಿ ನಿಲಯದಲ್ಲಿ ವಾಸವಾಗಿದ್ದಾರೆ. ಇನ್ನೂ ಜಿಯೋಲ್ ಹಾಸ್ಟೆಲ್ ಗೇಟ್ ಹಾಕಿಕೊಂಡು ಹೊರಗೆ ಬರದೇ ಒಬ್ಬಂಟಿಯಾಗಿ ವಸತಿ ನಿಲಯದಲ್ಲಿ ಕಾಲ ಕಳೆಯುತ್ತಿದ್ದಾರೆ.