ಹುಬ್ಬಳ್ಳಿ:ಕಮರಿಪೇಟೆಯಲ್ಲಿ ಪ್ರತಿವರ್ಷವೂ ದಸರಾ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ವಿಜಯ ದಶಮಿ ಸಂದರ್ಭದಲ್ಲಿ ನಡೆಸುವ ಟಗರು ಕಾಳಗ ನೋಡುಗರನ್ನು ಮೈನವಿರೇಳಿಸುವಂತೆ ಮಾಡಿತು.
ಗಂಡು ಮೆಟ್ಟಿದ ನಾಡಲ್ಲಿ ಗುಟುರು ಹಾಕಿದ ಟಗರುಗಳು: ಮೈನವಿರೇಳಿಸಿದ ಕಾಳಗ - ಹುಬ್ಬಳ್ಳಿಯಲ್ಲಿ ಮೈನವಿರೇಳಿಸಿದ ಟಗರು ಕಾಳಗ
ಉತ್ತರ ಕರ್ನಾಟಕದ ಹೃದಯ ಭಾಗದಲ್ಲಿರುವ ಹುಬ್ಬಳ್ಳಿಯ ಕಮರಿಪೇಟೆಯಲ್ಲಿ ದಸರಾ ಹಿನ್ನೆಲೆ ಮೈನವಿರೇಳಿಸುವ ಟಗರಿನ ಕಾಳಗ ನಡೆಸಲಾಯಿತು.
![ಗಂಡು ಮೆಟ್ಟಿದ ನಾಡಲ್ಲಿ ಗುಟುರು ಹಾಕಿದ ಟಗರುಗಳು: ಮೈನವಿರೇಳಿಸಿದ ಕಾಳಗ typical Dussehra rituals in Hubli](https://etvbharatimages.akamaized.net/etvbharat/prod-images/768-512-9303801-891-9303801-1603595663541.jpg)
ಗಂಡು ಮೇಟ್ಟಿದ ನಾಡಲ್ಲಿ ಗುಟುರು ಹಾಕಿದ ಟಗರುಗಳು
ಹುಬ್ಬಳ್ಳಿಯಲ್ಲಿ ಮೈನವಿರೇಳಿಸಿದ ಟಗರು ಕಾಳಗ
ಪ್ರತಿವರ್ಷ ದಸರಾ ಮತ್ತು ಟಗರು ಕಾಳಗವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಮಹಾಮಾರಿ ಕೊರೊನಾ ಆತಂಕದಿಂದ ಸಂಕ್ಷಿಪ್ತವಾಗಿ ಆಚರಣೆ ಮಾಡಲಾಗಿದೆ. ಈ ಟಗರಿನ ಕಾಳಗ ಸ್ನೇಹ, ಪ್ರೀತಿ ಸಹಬಾಳ್ವೆಗೆ ಸಾಕ್ಷಿಯಾಗಿದೆ ಎನ್ನುತ್ತಾರೆ ಇಲ್ಲಿನ ಜನರು.
ಸುಮಾರು ವರ್ಷಗಳಿಂದ ಟಗರಿನ ಕಾಳಗದ ಮೂಲಕ ವಿಜಯ ದಶಮಿ ಆಚರಣೆ ಮಾಡಲಾಗುತ್ತಿದ್ದು, ಈ ಕಾಳಗಕ್ಕೆ ಐತಿಹಾಸಿಕ ಪರಂಪರೆ ಇದೆ ಎನ್ನಲಾಗ್ತಿದೆ.
Last Updated : Oct 25, 2020, 9:18 AM IST