ಹುಬ್ಬಳ್ಳಿ: ಬೈಕ್ ಸ್ಕಿಡ್ ಆಗಿ ಬಿದ್ದು ಯುವಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಿನ್ನೆ ತಡರಾತ್ರಿ ಜಿಲ್ಲೆಯ ರೇವಡಿಹಾಳ್ ಕ್ರಾಸ್ ಬಳಿ ನಡೆದಿದೆ. ಮೃತರನ್ನು ನಗರದ ಅಕ್ಷಯ್ ಪಾರ್ಕ್ ನಿವಾಸಿ ಸಂತೋಷ್ ಹಾಗೂ ಜಯಪ್ರಕಾಶನಗರ ನಿವಾಸಿ ಥಾಮಸ್ ಎಂದು ಗುರುತಿಸಲಾಗಿದೆ.
ಮೃತ ಸಂತೋಷ್ ಹಾಗೂ ಥಾಮಸ್ ನಿನ್ನೆ ತಡರಾತ್ರಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹುಬ್ಬಳ್ಳಿಗೆ ವಾಪಸ್ ಆಗುವಾಗ ರೇವಡಿಹಾಳ್ ಕ್ರಾಸ್ ನಲ್ಲಿ ಅಪಘಾತ ನಡೆದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.