ಹುಬ್ಬಳ್ಳಿ:ಧಾರವಾಡದ ಕೃಷಿ ಇಲಾಖೆಯ ಅಧಿಕಾರಿಗಳ ಮಹಾ ಎಡವಟ್ಟು ಬಯಲು ಮಾಡಿದ್ದ ಈಟಿವಿ ಭಾರತ್ ವರದಿಯ ಬಿಗ್ ಇಂಪ್ಯಾಕ್ಟ್ ಆಗಿದೆ. ಪರಿಹಾರ ಡಾಟಾ ಎಂಟ್ರಿ ರಿಪೋರ್ಟ್‌ನಲ್ಲಿ ಎರಡೂ ತಾಲೂಕುಗಳನ್ನೇ ಕೃಷಿ ಅಧಿಕಾರಿಗಳು ಕೈಬಿಟ್ಟಿದ್ದರು. ಈ ಬಗ್ಗೆ ಈಟಿವಿ ವರದಿ ಬಿತ್ತರಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕೃಷಿ ಇಲಾಖೆಯು ಎರಡು ತಾಲೂಕಿನ ಹೆಸರನ್ನು ಸೇರ್ಪಡೆ ಮಾಡಿದೆ.
ಹೌದು, ಅಧಿಕಾರಿಗಳ ನಡೆಯಿಂದ ಅನ್ನದಾತ ಹಿಡಿಶಾಪ ಹಾಕುವಂತಾಗಿತ್ತು. ಪರಿಹಾರ ಡಾಟಾ ಎಂಟ್ರಿ ಪ್ರೋಗ್ರೇಸ್ ರಿಪೋರ್ಟ್ ಲಭ್ಯವಾಗಿತ್ತು. ಈ ರಿಪೋರ್ಟ್‌ನಲ್ಲಿ ಕಲಘಟಗಿ ಹಾಗೂ ಅಳ್ನಾವರ ತಾಲೂಕನ್ನು ಕೈಬಿಟ್ಟ ಅಧಿಕಾರಿಗಳ ಬೇಜವಾಬ್ದಾರಿತನವನ್ನು ಈಟಿವಿ ಬಯಲು ಮಾಡಿತ್ತು. ವರದಿ ಬಿತ್ತರಿಸಿದ ಬೆನ್ನಲ್ಲೇ ಕೃಷಿ ಇಲಾಖೆ ಎಚ್ಚೆತ್ತುಕೊಂಡಿದೆ.