ಹುಬ್ಬಳ್ಳಿ : ಅನಾರೋಗ್ಯದಿಂದ ಬಳಲುತ್ತಿದ್ದ ಅತ್ತಿಗೆ ಹಾಗೂ ಅಪಘಾತದಲ್ಲಿ ಮೈದುನ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಬೀರಬಂದ ಓಣಿಯ ನಿವಾಸಿ ಹನಿಬಾಬಿ ಹಾಗೂ ಮೈದುನ ಪೈರೋಝ್ ಧಾರವಾಡ ಎಂಬವವರೇ ಮೃತರು.
ಹುಬ್ಬಳ್ಳಿಯಲ್ಲಿ ಹೃದಯವಿದ್ರಾವಕ ಘಟನೆ: ಅನಾರೋಗ್ಯದಿಂದ ಅತ್ತಿಗೆ, ಅಪಘಾತದಲ್ಲಿ ಮೈದುನ ಸಾವು - two relatives died in hubballi
ಅನಾರೋಗ್ಯದಿಂದ ಅತ್ತಿಗೆ, ಅಪಘಾತದಲ್ಲಿ ಮೈದುನ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯಲ್ಲಿ ಹೃದಯವಿದ್ರಾವಕ ಘಟನೆ:ಅನಾರೋಗ್ಯದಿಂದ ಅತ್ತಿಗೆ, ಅಪಘಾತದಲ್ಲಿ ಮೈದುನ ಸಾವು
ಹನಿಬಾಬಿಯವರಿಗೆ ಆರೋಗ್ಯದಲ್ಲಿ ತೀವ್ರ ಸಮಸ್ಯೆಯಾಗಿದ್ದು, ಅವರನ್ನು ಕಿಮ್ಸ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವಿಗೀಡಾಗಿದ್ದಾರೆ. ಮತ್ತೊಂದೆಡೆ ನಗರದ ಹೊಸೂರ ಸರ್ಕಲ್ ಬಳಿ ಟಿಪ್ಪರ್ ಡಿಕ್ಕಿ ಹೊಡೆದಿದ್ದರಿಂದ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ಪೈರೋಝ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ವಿಷಯ ತಿಳಿದು ಮೃತರ ಸಂಬಂಧಿಕರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಈ ಸಂಬಂಧ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ :ಎತ್ತಿನಗಾಡಿ ಜೊತೆ ಹೇಮಾವತಿ ನಾಲೆಗೆ ಬಿದ್ದು ಜೋಡೆತ್ತು ಸಾವು : ರೈತ ಪಾರು