ಧಾರವಾಡ:ಲಂಚ ಪಡೆಯುತ್ತಿದ್ದ ವೇಳೆ ಹಾವೇರಿ ಲೋಕಾಯುಕ್ತರು ದಾಳಿ ಮಾಡಿದ್ದು, ಏತ ನೀರಾವರಿ ಇಲಾಖೆ ಇಬ್ಬರು ಅಧಿಕಾರಿಗಳು ಬಲೆಗೆ ಬಿದ್ದಿದ್ದಾರೆ. ಏತ ನೀರಾವರಿ ಇಲಾಖೆ ಕಚೇರಿಯಲ್ಲಿ ಲಂಚ ಸ್ವೀಕಾರ ಮಾಡುತ್ತಿದ್ದ ಸಮಯದಲ್ಲಿ ಮಂಜುನಾಥ ಬಿ. ಹಾಗೂ ಪ್ರಕಾಶ ಹೊಸಮನಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಶಿಗ್ಗಾವಿ ಏತ ನೀರಾವರಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ ಹಾಗೂ ಕಿರಿಯ ಅಭಿಯಂತರ ಪ್ರಕಾಶ ಅವರು ಗುತ್ತಿಗೆದಾರ ಬಾಲಕೃಷ್ಣ ನಾಯ್ಕರಿಂದ ಅಧಿಕಾರಿಗಳು 1 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ನಡೆಯಬೇಕಿದ್ದ ರಸ್ತೆ ಕಾಮಗಾರಿಗಳ ಮೊದಲ ಬಿಲ್ಗೆ ಲಂಚ ಪಡೆದುಕೊಂಡು ಅಧಿಕಾರಿಗಳು ಮಂಜೂರಿ ಮಾಡಿದ್ದರು. ಅಂತಿಮ ಬಿಲ್ ಪಾಸ್ ಮಾಡಲು ಪುನಃ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಣ ಕೊಡುವಾಗ ಲೋಕಾಯುಕ್ತರು ಟ್ರ್ಯಾಪ್ ಮಾಡಿದ್ದಾರೆ.
ಇದನ್ನೂ ಓದಿ:ಮೈಸೂರು: ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಉಪನ್ಯಾಸಕನಿಂದ ಶಿಕ್ಷಕರಿಗೆ ವಂಚನೆ ಆರೋಪ
ಹಿಂದಿನ ಪ್ರಕರಣಗಳು, ಲಂಚಕ್ಕೆ ಬೇಡಿಕೆಯಿಟ್ಟಿದ್ದ ಬಿಇಒ ಮೇಲೆ ದಾಳಿ:ಧಾರವಾಡಜಿಲ್ಲೆಯ ಕುಂದಗೋಳ ಬಿಇಒ ನಿವಾಸದ ಮೇಲೆ ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಕುಂದಗೋಳ ಬಿಇಒ ಡಾ.ವಿದ್ಯಾ ಕುಂದರಗಿ ಅವರ ಧಾರವಾಡ ಹೊಯ್ಸಳ ನಗರ ಬಡಾವಣೆಯಲ್ಲಿನ ಮನೆ ಮೇಲೆ ದಾಳಿ ಮಾಡಲಾಗಿತ್ತು.