ಧಾರವಾಡ:ನಗರದ ಕಮಲಾಪುರ ಹೊರವಲಯದಲ್ಲಿ ಹಿಂದಿನ ರಾತ್ರಿ ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರನ್ನು ಭೀಕರ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಧಾರವಾಡ ವಿದ್ಯಾಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸ್ರು ಬಂಧಿಸಿದ್ದಾರೆ. ಅರ್ಬಾಜ್ ಹಂಚಿನಾಳ, ನದೀಮ್, ರಹಿಮ್ ಸೇರಿ ನಾಲ್ವರು ಬಂಧಿತ ಆರೋಪಿಗಳು. ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಬಳಿಕ ದಾಂಡೇಲಿಗೆ ಹೋಗಿ ಆರೋಪಿಗಳು ತಲೆಮರೆಸಿಕೊಂಡಿದ್ದರು. ದಾಂಡೇಲಿಯಲ್ಲಿ ಪೊಲೀಸರ ಹುಡುಕಾಟಕ್ಕೆ ಜಾಲ ಬೀಸುತ್ತಿದ್ದಂತೆ ಆರೋಪಿಗಳು ಮುಂಡಗೋಡಕ್ಕೆ ಪರಾರಿಯಾಗಿದ್ದರು. ನಂತರ ಮುಂಡಗೋಡದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿ ಧಾರವಾಡಕ್ಕೆ ಕರೆತಂದಿದ್ದಾರೆ.
ಕಳೆದ ರಾತ್ರಿ ಕಮಲಾಪುರದಲ್ಲಿ ರಿಯಲ್ ಎಸ್ಟೆಲ್ ಉದ್ಯಮಿ ಮಹಮ್ಮದ್ ಕುಡಚಿ ಕೊಲೆ ನಡೆದಿತ್ತು. ಇದೇ ವೇಳೆ, ಒಬ್ಬ ವ್ಯಕ್ತಿಗೂ ಏಟು ತಾಗಿ ಓಡಿ ಹೋಗುವಾಗ ದಾರಿ ಮಧ್ಯೆಯೇ ಆರೋಪಿ ಗಣೇಶ ಮೃತಪಟ್ಟಿದ್ದರು. ಕೊಲೆ ಮಾಡಿ ಆರೋಪಿಗಳು ರಾತ್ರಿಯೇ ಪರಾರಿಯಾಗಿದ್ದರು.
ಹಳೇ ವ್ಯಷಮ್ಯವೇ ಹತ್ಯೆಗೆ ಕಾರಣ:ಅರ್ಬಾಜ್ ಹಂಚಿನಾಳ ಈ ಹಿಂದೆ ಕೊಲೆಯಾಗಿರುವ ರೌಡಿ ಶೀಟರ ಫ್ರೂಟ್ ಇರ್ಫಾನ್ ಪುತ್ರರಾಗಿದ್ದಾರೆ. ಫ್ರೂಟ್ ಇರ್ಫಾನ್ ಅವರು ಹಿಂದೆ ಮಹಮ್ಮದ ಕುಡಚಿ ಜೊತೆ ರಿಯಲ್ ಎಸ್ಟೇಟ್ ಮಾಡುತ್ತಿದ್ದರು. ತಂದೆಯ ಕೊಲೆ ಬಳಿಕ ಕುಡಚಿ ಬಳಿ ಅರ್ಬಾಜ್ ಹಣಕ್ಕೆ ಬೇಡಿಕೆ ಇಟ್ಟಿದ್ದನು. ಆಗಾಗ್ಗೆ ಈ ಸಂಬಂಧ ಇಬ್ಬರ ಮಧ್ಯೆ ಜಗಳ ಕೂಡ ನಡೆದಿತ್ತು. ಇದೇ ವೈಷಮ್ಯಕ್ಕೆ ಕುಡಚಿಯನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ