ಧಾರವಾಡ : ಜಿಲ್ಲೆಯ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ಹದ್ದಿನಲ್ಲಿ ಬರುವ ಹೊಲದಲ್ಲಿ ಕುರಿ ಕಾಯುತ್ತಿದ್ದ ಕುರಿಗಾಯಿಗಳಿಗೆ ಮತ್ತು ಕುರಿಗಳಿಗೆ ಸಿಡಿಲು ಬಡಿದಿದೆ ಎಂದು ತಿಳಿದು ಬಂದಿದೆ. ಪರಿಣಾಮ ಇಬ್ಬರು ಕುರಿಗಾಯಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೇ, ಸ್ಥಳದಲ್ಲೇ 15 ಕುರಿಗಳು ಮೃತಪಟ್ಟಿವೆ.
ತಾಲೂಕಿನ ಗೊಬ್ಬರಗುಪ್ಪಿ ಗ್ರಾಮದ ಸಹೋದರರಾದ ದೇವರಾಜ ದ್ಯಾಮಪ್ಪ ಪೂಜಾರ (18)ಹಾಗೂ ಕರಿಯಪ್ಪ ದ್ಯಾಮಪ್ಪ ಪೂಜಾರ ಎಂಬಿಬ್ಬರು ಸಿಡಿಲು ಬಡಿದು ಗಾಯಗೊಂಡಿದ್ದಾರೆ. ಸುರಿಯುತ್ತಿದ್ದ ಭಾರಿ ಮಳೆಯಿಂದ ನೆರವು ಪಡೆಯಲು ಮರದ ಕೆಳಗೆ ಕುರಿಗಳೊಂದಿಗೆ ನಿಂತ ಸಂದರ್ಭದಲ್ಲಿ ಸಿಡಿಲು ಬಡಿದಿದೆ ಎನ್ನಲಾಗಿದೆ.