ಹುಬ್ಬಳ್ಳಿ: ಮಾರಾಟ ಮಾಡಲು ಗಾಂಜಾ ಸಾಗಿಸುತ್ತಿದ್ದ ಆರೋಪದ ಮೇಲೆ ಕಲಘಟಗಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿ: ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ
ಗಾಂಜಾ ಸಾಗಿಸುತ್ತಿದ್ದ ಆರೋಪದ ಮೇಲೆ ಹುಬ್ಬಳ್ಳಿಯ ಕಲಘಟಗಿಯಲ್ಲಿ ಇಬ್ಬರನ್ನು ಬಂಧಿಸಿ ಮಾಲು ವಶಕ್ಕೆ ಪಡೆಯಲಾಗಿದೆ.
ಗಾಂಜಾ ಸಾಗಿಸಲು ಯತ್ನಿಸಿದ ಇಬ್ಬರ ಬಂಧನ
ಮಹದೇವಪ್ಪ ಕಿಳ್ಳೆಕ್ಯಾತರ(25), ಶಂಕ್ರಪ್ಪ ಕಿಳ್ಳೆಕ್ಯಾತರ(45) ಬಂಧಿತ ಆರೋಪಿಗಳು. ಇವರಿಂದ 500 ಗ್ರಾಂ ಗಾಂಜಾ ಹಾಗೂ ಒಂದು ಬೈಕ್ ವಶಕ್ಕೆ ಪಡೆಸಿಕೊಳ್ಳಲಾಗಿದೆ.
ಗಳಗಿನಕೊಪ್ಪ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುವ ಹಿನ್ನೆಲೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.