ಹುಬ್ಬಳ್ಳಿ: ತಗ್ಗು ಗುಂಡಿಗಳಿಂದ ಕೂಡಿರುವ ರಸ್ತೆಗಳನ್ನು ಸರಿಪಡಿಸಿ ಎಂದು ಆಗ್ರಹಿಸಿ ಹದಗೆಟ್ಟ ರಸ್ತೆ ಮೇಲೆ ಮಹಿಳೆಯರು ತುಳಸಿ ವಿವಾಹವನ್ನು ಮಾಡಿ ಜನಪ್ರತಿನಿಧಿಗಳು ಮತ್ತು ಪಾಲಿಕೆ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಗರದ ಗೋಪನಕೊಪ್ಪ ಗ್ರಾಮದ ಸ್ವಾಗತ ಕಾಲೋನಿಯ ಹದಗೆಟ್ಟ ರಸ್ತೆಯಲ್ಲಿಯೇ ಮಹಿಳೆಯರು ತುಳಸಿ ವಿವಾಹ ಮಾಡಿ, ಸಮರ್ಪಕ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಪಾಲಿಕೆ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಈ ಕುರಿತು ಮಾತನಾಡಿರುವ ಸ್ಥಳೀಯ ನಿವಾಸಿ ಸವಿತಾ, ಮಳೆಗಾಲ ಆರಂಭವಾದ ಮೇಲೆ ಈ ಬಡಾವಣೆಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಗೆಳಿಗೆ ನೀರು ನುಗ್ಗಿ ಪರದಾಡುವಂತ ಸ್ಥಿತಿ ನಿರ್ಮಾಣವಾಗುತ್ತದೆ.