ಧಾರವಾಡ: ಪಟಾಕಿ ಸಾಗಿಸುತ್ತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ, ಲಾರಿಯಿಂದ ಪಟಾಕಿ ಬಾಕ್ಸ್ಗಳು ಹೊರಬಿದ್ದಿದ್ದು ಕೆಲಹೊತ್ತು ಆತಂಕ ಸೃಷ್ಟಿಯಾಗಿತ್ತು.
ಧಾರವಾಡ ಬೈಪಾಸ್‌ನ ಇಟ್ಟಿಗಟ್ಟಿ ಬಳಿ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ದೌಡಾಯಿಸಿದ್ದಾರೆ. ಶಿವಕಾಶಿಯಿಂದ ಮುಂಬೈಗೆ ಪಟಾಕಿ ತುಂಬಿಕೊಂಡು ಲಾರಿ ಹೊರಟಿತ್ತು ಎಂದು ತಿಳಿದುಬಂದಿದೆ.
ಲಾರಿಗೆ ಲಾರಿ ಡಿಕ್ಕಿ, ಪರಿಶೀಲನೆ ಅಗ್ನಿ ಅವಘಡ ತಡೆ ಸಲಕರಣೆಯಿಲ್ಲದೇ ಸಾಗಾಟ ನಡೆಸಲಾಗುತ್ತಿತ್ತು. ಅಗ್ನಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಪಟಾಕಿ ಸಾಗಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಡಿಕ್ಕಿ ರಭಸಕ್ಕೆ ಪಟಾಕಿಗೆ ಬೆಂಕಿ ಹೊತ್ತಿಕೊಂಡಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು.
ಈ ಸುದ್ದಿಯನ್ನೂ ಓದಿ:ಕಾಫಿನಾಡಿನಲ್ಲಿ ಕೆಎಫ್ಡಿ ಪ್ರಕರಣ ಪತ್ತೆ: ಲಸಿಕೆ ಹಾಕಲು ನಿರ್ಧಾರ
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಹಟ್ಟೇಕರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆರೆ ಪಕ್ಕದಲ್ಲೇ ಲಾರಿ ನಿಲ್ಲಿಸಿ ಪರಿಶೀಲನೆ ಮಾಡಲಾಯ್ತು.