ಹುಬ್ಬಳ್ಳಿ: ಗ್ರಾಪಂ ಸದಸ್ಯನೊಬ್ಬ ನನಗೆ ನೀವು ಮತ ಹಾಕಿಲ್ಲ. ಗ್ರಾಮದಿಂದ ಹೊರ ಹೋಗಿ ಎಂದು ಗ್ರಾಮಸ್ಥರಿಗೆ ಪೀಡಿಸುತ್ತಿದ್ದಾನೆ ಎಂಬ ಆರೋಪ ಹುಬ್ಬಳ್ಳಿಯಲ್ಲಿ ಕೇಳಿ ಬಂದಿದೆ.
ಹುಬ್ಬಳ್ಳಿ ತಾಲೂಕಿನ ತಿಮ್ಮಸಾಗರದಲ್ಲಿ ಈ ಘಟನೆ ನಡೆದಿದೆ. ಅಂಚಟಗೇರಿ ಗ್ರಾಪಂ ಸದಸ್ಯ ಸಹದೇವಪ್ಪ ಮಾಳಗಿ ಎಂಬಾತ ಇಲ್ಲಿನ ಸ್ಥಳೀಯ ಜನರನ್ನ ನಿತ್ಯವೂ ಜಾಗ ಬಿಟ್ಟು ಹೋಗಿ ಅಂತ ಬೆದರಿಸುತ್ತಿದ್ದಾನಂತೆ. ಸರ್ಕಾರಿ ಜಾಗದಲ್ಲಿ ಇಲ್ಲಿನ ಜನ ವಾಸಿಸುತ್ತಿದ್ದಾರೆ. ದಿವಂಗತ ಶಿವಳ್ಳಿ ಸಚಿವರಾದ ವೇಳೆ ಇಲ್ಲಿನ ಜನರ ಅಭಿವೃದ್ಧಿಗೆ ರಸ್ತೆ ಸೇರಿದಂತೆ ನೀರಿನ ಸೌಲಭ್ಯ ಸಹ ನೀಡಿದ್ರು. ಅಲ್ಲದೇ ಈ ಜಾಗದ ಹಕ್ಕುಪತ್ರ ನೀಡುವ ಭರವಸೆಯನ್ನು ಸಹ ನೀಡಿದ್ರು. ಆದರೆ, ಅವರು ನಿಧನರಾದ ಬಳಿಕ ಎಲ್ಲವೂ ಬದಲಾಗಿದೆ.