ಧಾರವಾಡ: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ ರವಿಚಂದ್ರನ್ ನಟನೆಯ ಮೊದಲ ಚಿತ್ರ 'ತ್ರಿವಿಕ್ರಮ' ಪ್ರಮೋಶನ್ಗಾಗಿ ಚಿತ್ರತಂಡ ಧಾರವಾಡದ ಕೆಸಿಡಿ ಕಾಲೇಜಿಗೆ ಆಗಮಿಸಿತ್ತು.
ಚಿತ್ರತಂಡವನ್ನು ಬರಮಾಡಿಕೊಂಡ ಕಾಲೇಜಿನ ಯುವಕ-ಯುವತಿಯರು ಹೊಸ ಚಿತ್ರಕ್ಕೆ ಶುಭ ಕೋರಿದರು. ಅಲ್ಲದೇ ವಿದ್ಯಾರ್ಥಿಗಳೆದುರು ನಟ ವಿಕ್ರಮ್ ನೃತ್ಯ ಮಾಡಿ ರಂಜಿಸಿದರು. ಇದೇ ತಿಂಗಳ 24ಕ್ಕೆ ಸಿನಿಮಾ ರಿಲೀಸ್ ಆಗಲಿದ್ದು, ಎಲ್ಲರೂ ಹಾರೈಸಬೇಕು ಎಂದು ಮನವಿ ಮಾಡಿದರು.