ಕರ್ನಾಟಕ

karnataka

ETV Bharat / state

ನೇಪಾಳ ಪ್ರವಾಸಕ್ಕೆ ಹೋಗಿ ಜೀವನದ ಪಯಣ ಮುಗಿಸಿದ ಹುಬ್ಬಳ್ಳಿ ಮೂಲದ ಮಹಿಳೆ - Kannada news

ಪ್ರವಾಸ 1 ತಿಂಗಳದ್ದಾಗಿತ್ತು. ಅದರಲ್ಲಿ 10 ದಿನ ಪೂರೈಸಿದ್ದು, ಇನ್ನೂ 20 ದಿನಗಳ ಪ್ರವಾಸವಿತ್ತು. ಆದರೆ, ಕಟ್ಮಂಡುವಿನ ಇಸ್ಕಾನ್​​ ದೇವಸ್ಥಾನದಲ್ಲಿ ಏಕಾಏಕಿ ಮರದ ಕೊಂಬೆ ಬಿದ್ದು ಎರಡು ದಿನಗಳ ಹಿಂದೆ ಸಾವಿಗೀಡಾಗಿದ್ದಾರೆ. ಇವರ ಮೃತದೇಹ ಎರಡು ದಿನಗಳ ಬಳಿಕ ನಗರಕ್ಕೆ ಆಗಮಿಸಲಿದೆ ಎನ್ನಲಾಗಿದೆ.

ನೇಪಾಳದಲ್ಲಿ ಹುಬ್ಬಳ್ಳಿ ಮೂಲದ ಮಹಿಳೆ ಸಾವು

By

Published : Jun 10, 2019, 8:30 PM IST

ಹುಬ್ಬಳ್ಳಿ: ನೇಪಾಳ ಪ್ರವಾಸದಲ್ಲಿದ್ದ ಹುಬ್ಬಳ್ಳಿಯ ಮಹಿಳೆಯೊಬ್ಬರು ಮರದ ಕೊಂಬೆ ಬಿದ್ದು ಸಾವಿಗೀಡಾದ ಘಟನೆ ನೇಪಾಳದ ಕಟ್ಮುಂಡವಿನಲ್ಲಿ ನಡೆದಿದೆ.

ಹುಬ್ಬಳ್ಳಿಯ ರಾಧಾಕೃಷ್ಣಗಲ್ಲಿ ನಿವಾಸಿ ನಂದಾ ಮಲ್ಲಿಕಾರ್ಜುನ ಡಂಬಳ (68) ಮೃತ ಮಹಿಳೆ. ಕಳೆದ ತಿಂಗಳು ಬಳ್ಳಾರಿ ಜಿಲ್ಲಾ ಶಿರಗುಪ್ಪಾ ವೆಂಕಟೇಶ್ವರ ಟ್ರಾವೆಲ್ಸ್​​ ಮುಖಾಂತರ 25 ಜನರ ತಂಡದೊಂದಿಗೆ ಪ್ರವಾಸ ಕೈಗೊಂಡಿದ್ದರು.

ಪ್ರವಾಸ 1 ತಿಂಗಳದ್ದಾಗಿತ್ತು. ಅದರಲ್ಲಿ 10 ದಿನ ಪೂರೈಸಿದ್ದು, ಇನ್ನೂ 20 ದಿನಗಳ ಪ್ರವಾಸವಿತ್ತು. ಆದರೆ, ಕಟ್ಮಂಡುವಿನ ಇಸ್ಕಾನ್​​ ದೇವಸ್ಥಾನದಲ್ಲಿ ಏಕಾಏಕಿ ಮರದ ಕೊಂಬೆ ಬಿದ್ದು ಎರಡು ದಿನಗಳ ಹಿಂದೆ ಸಾವಿಗೀಡಾಗಿದ್ದಾರೆ. ಇವರ ಮೃತದೇಹ ಎರಡು ದಿನಗಳ ಬಳಿಕ ನಗರಕ್ಕೆ ಆಗಮಿಸಲಿದೆ ಎನ್ನಲಾಗಿದೆ.

ABOUT THE AUTHOR

...view details