ಕರ್ನಾಟಕ

karnataka

ETV Bharat / state

ಸಾರಿಗೆ ಸಂಸ್ಥೆಯಿಂದ ಕೋವಿಡ್ ಕಾರ್ಯಗಳಿಗೆ ಸಾರಿಗೆ ಟ್ರಕ್ ನಿಯೋಜನೆ - Dharwad news

ಟ್ರಕ್‌ಗಳಿಗೆ 10 ಚಾಲಕರನ್ನು ಸಹ ಸರತಿಯ ಮೇಲೆ ಕಾರ್ಯ ನಿರ್ವಹಿಸಲು ನಿಯೋಜನೆ ಮಾಡಲಾಗಿದೆ. ಇದರೊಂದಿಗೆ 47 ಲೀಟರ್ ಸಾಮರ್ಥ್ಯದ 5 ಸಿಲಿಂಡರ್‌ಗಳನ್ನು ಸಹ ಪಾಲಿಕೆ ನೀಡಿದೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾ ಬಾಜಪೇಯ ತಿಳಿಸಿದ್ದಾರೆ.

Transport Truck started for covid related works by Transport Organization
ಸಾರಿಗೆ ಸಂಸ್ಥೆಯಿಂದ ಕೋವಿಡ್ ಕಾರ್ಯಗಳಿಗಾಗಿ ಸಾರಿಗೆ ಟ್ರಕ್ ನಿಯೋಜನೆ

By

Published : May 13, 2021, 10:54 PM IST

ಹುಬ್ಬಳ್ಳಿ:ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಪ್ರಾದೇಶಿಕ ಕಾರ್ಯಗಾರದಿಂದ ಕೋವಿಡ್ ಕಾರ್ಯಗಳ ನೆರವಿಗೆ 5 ಸಾರಿಗೆ ಟ್ರಕ್‌ಗಳನ್ನು ನಿಯೋಜಿಸಲಾಗಿದೆ. ಈ ಸಾರಿಗೆ ಟ್ರಕ್‌ಗಳನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನೀಡಲಾಗಿದ್ದು, ಆಕ್ಸಿಜನ್, ವೈದ್ಯಕೀಯ ಉಪಕರಣ ಸರಬರಾಜು ಸೇರಿದಂತೆ ಹಲವು ಕಾರ್ಯಗಳಿಗೆ ಬಳಸಾಗುತ್ತಿದೆ.

ಟ್ರಕ್‌ಗಳಿಗೆ 10 ಚಾಲಕರನ್ನು ಸಹ ಸರತಿಯ ಮೇಲೆ ಕಾರ್ಯ ನಿರ್ವಹಿಸಲು ನಿಯೋಜಿಸಲಾಗಿದೆ. ಇದರೊಂದಿಗೆ 47 ಲೀಟರ್ ಸಾಮರ್ಥ್ಯದ 5 ಸಿಲಿಂಡರ್‌ಗಳನ್ನು ಸಹ ಪಾಲಿಕೆ ನೀಡಿದೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾ ಬಾಜಪೇಯ ತಿಳಿಸಿದ್ದಾರೆ.

ಟ್ರಕ್‌ಗಳನ್ನು ನೀಡಿರುವುದಿಂದ ಕೋವಿಡ್ ಕಾರ್ಯಗಳನ್ನು ಕೈಗೊಳ್ಳಲು ಪಾಲಿಕೆಗೆ ಅನುಕೂಲವಾಗಿದೆ ಎಂದು ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಲಾಕ್​ಡೌನ್​ ಹಸಿವು: ಧಾರವಾಡದಲ್ಲಿ ಯುವಕರಿಂದ ಫುಡ್ ಕಿಟ್ ವಿತರಣೆ

ABOUT THE AUTHOR

...view details