ಕರ್ನಾಟಕ

karnataka

ETV Bharat / state

ಲಾಕ್​ಡೌನ್ ಸಮಯ ಸದ್ಭಳಕೆ: ಗುಜರಿ ತೆಗೆದು ಗಾರ್ಡನ್ ಮಾಡಿದ ಸಾರಿಗೆ ಸಿಬ್ಬಂದಿ! - garden in Hubli Rural Bus stand news

ಬೆಳಗ್ಗೆ 8 ಗಂಟೆಗೆ ಘಟಕಕ್ಕೆ ಬಂದು ಬಸ್‌ಗಳ‌ ನಿರ್ವಹಣೆ, ಒಂದಿಷ್ಟು ಮುನ್ನೆಚ್ಚರಿಕೆ ಕ್ರಮಗಳ ಕಾರ್ಯ ಮುಗಿಸಿಕೊಂಡು ಉಳಿದ ಸಮಯದಲ್ಲಿ ಸಾರಿಗೆ ಸಂಸ್ಥೆ ಸಿಬ್ಬಂದಿ ಸುಂದರ ಗಾರ್ಡನ್​ ನಿರ್ಮಿಸಿದ್ದಾರೆ.

ಗುಜರಿ ತೆಗೆದು ಗಾರ್ಡನ್ ಮಾಡಿದ ಸಾರಿಗೆ ಸಿಬ್ಬಂದಿ
ಗುಜರಿ ತೆಗೆದು ಗಾರ್ಡನ್ ಮಾಡಿದ ಸಾರಿಗೆ ಸಿಬ್ಬಂದಿ

By

Published : Aug 4, 2020, 10:29 PM IST

ಹುಬ್ಬಳ್ಳಿ: ಕಸದ ಕೊಂಪೆಯಂತಿದ್ದ ಹುಬ್ಬಳ್ಳಿಯ ಎರಡನೇ ಗ್ರಾಮಾಂತರ ಸಾರಿಗೆ ಘಟಕ ಇದೀಗ ಹಸಿರಿನಿಂದ ಕಂಗೊಳಿಸುತ್ತಿದೆ. ಗುಜರಿ, ಗ್ರಿಸ್, ವೇಸ್ಟ್ ಬಟ್ಟೆಯಿಂದ ತುಂಬಿದ್ದ ಸ್ಥಳಗಳಲ್ಲಿ ಗಿಡಗಳು ನಳನಳಿಸುತ್ತಿವೆ. ಘಟಕದಲ್ಲಿರುವ ಸಂಪನ್ಮೂಲವನ್ನು ಕ್ರೋಢೀಕರಿಸಿಕೊಂಡು ಲಾಕ್‌ಡೌನ್ ಅವಧಿಯಲ್ಲಿ ಸಿಬ್ಬಂದಿಗಳೇೆ ಹೊಸ ರೂಪ ನೀಡಿದ್ದಾರೆ.

ಗುಜರಿ ತೆಗೆದು ಗಾರ್ಡನ್ ಮಾಡಿದ ಸಾರಿಗೆ ಸಿಬ್ಬಂದಿ

ಲಾಕ್‌ಡೌನ್ ಸಮಯದಲ್ಲಿ ಘಟಕದಲ್ಲಿ ನಿಲ್ಲಿಸಿರುವ ಬಸ್ ನಿರ್ವಹಣೆಗಾಗಿ ಆಗಮಿಸುತ್ತಿದ್ದ ಚಾಲಕರು, ನಿರ್ವಾಹಕರು, ಮೆಕ್ಯಾನಿಕ್‌ಗಳು ಉಳಿದ ಸಮಯವನ್ನ ಘಟಕದ ಸೌಂದರ್ಯಕ್ಕೆ ಮೀಸಲಿಟ್ಟು, ನಿತ್ಯವೂ ಒಂದಿಲ್ಲಾ ಒಂದು ಕೆಲಸ ಮಾಡುವ ಮೂಲಕ ಮೂರು ತಿಂಗಳಲ್ಲಿ ಘಟಕದ ಚಿತ್ರಣವನ್ನೇ ಬದಲಿಸಿದ್ದಾರೆ.

ಈ ಘಟಕದಲ್ಲಿ ಸಾಕಷ್ಟು ಸ್ಥಳವಿದ್ದು, ಬಳಕೆಯಾಗದ ಜಾಗದಲ್ಲಿ ಒಂದಿಷ್ಟು ಗಿಡಗಳನ್ನು ನೆಟ್ಟು ಹಸಿರು ವಾತಾವರಣ ಸೃಷ್ಟಿಸಬೇಕೆಂಬ ಅಭಿಪ್ರಾಯವಿತ್ತು. ಅದಕ್ಕೆ ಲಾಕ್​ಡೌನ್ ಸಮಯದಲ್ಲಿ ಕಾಲ ಕೂಡಿ ಬಂತು. ಬೆಳಗ್ಗೆ 8 ಗಂಟೆಗೆ ಘಟಕಕ್ಕೆ ಬಂದು ಬಸ್‌ಗಳ‌ ನಿರ್ವಹಣೆ, ಒಂದಿಷ್ಟು ಮುನ್ನೆಚ್ಚರಿಕೆ ಕ್ರಮಗಳ ಕಾರ್ಯ ಮುಗಿಸಿಕೊಂಡು ಉಳಿದ ಸಮಯವನ್ನು ಗಾರ್ಡನ್​ ನಿರ್ಮಿಸಲು ಮೀಸಲಿಟ್ಟಿದ್ದೆವು ಎಂದು ಸಿಬ್ಬಂದಿ ಹೇಳಿದ್ದಾರೆ.

ಗುಜರಿ ತೆಗೆದು ಗಾರ್ಡನ್ ಮಾಡಿದ ಸಾರಿಗೆ ಸಿಬ್ಬಂದಿ

ಬಸ್ ಸಂಚಾರ ಆರಂಭವಾಗುವುದರೊಳಗೆ ಡಿಪೋ ಆವರಣ ಸುಂದರಗೊಳಿಸಬೇಕೆಂದು ಪಣತೊಟ್ಟು ಎಲ್ಲೆಂದರಲ್ಲಿ ಹಾಕಿದ್ದ ಗುಜರಿ ಸಾಮಾಗ್ರಿಗಳನ್ನು ಒಂದೆಡೆ ಸಾಗಿಸಿ ಈ ಜಾಗವನ್ನು ಸಂಪೂರ್ಣ ಹಸಿರುಮಯ ಮಾಡಿದ್ದಾರೆ. ನಿರಂತರ ಪರಿಶ್ರಮದಿಂದ ಘಟಕದ ಚಿತ್ರಣವೇ ಬದಲಾಗಿದೆ. ಸಿಬ್ಬಂದಿಯ ಕೆಲಸಕ್ಕೆ ಹಿರಿಯ ಅಧಿಕಾರಿಗಳು ಕೈ ಜೋಡಿಸಿ ಒಂದು ಸುಂದರ ಗಾರ್ಡನ್ ನಿರ್ಮಿಸಿದ್ದಾರೆ. ಸಾರಿಗೆ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details