ಹುಬ್ಬಳ್ಳಿ:ಮನುಷ್ಯ ಬದುಕಿದ್ದರೆ ಜಗತ್ತನ್ನು ನೋಡಬಲ್ಲ. ಆದರೆ, ಜೀವ ಕಳೆದುಕೊಂಡರೆ ಏನನ್ನೂ ನೋಡಲು ಆಗುವುದಿಲ್ಲ. ಸರಕು ಸಾಗಣೆ ವಾಹನಗಳಲ್ಲಿ ಜನರನ್ನು ಕರೆದೊಯ್ಯುವುದು ಕಾನೂನು ಬಾಹಿರ. ಸಾರ್ವಜನಿಕರು ಸಾರಿಗೆ ಸಂಸ್ಥೆ ವಾಹನಗಳನ್ನೇ ಸಂಚಾರಕ್ಕೆ ಬಳಸಬೇಕು. ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹುಬ್ಬಳ್ಳಿ ತಹಶೀಲ್ದಾರ್ ಶಶಿಧರ್ ಮಾಡ್ಯಾಳ ಹೇಳಿದ್ದಾರೆ.
ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು.. ತಹಶೀಲ್ದಾರ್ ಮಾಡ್ಯಾಳ - Hubli Tahsildar Shashidhar Madyaala
31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಕುಂದಗೋಳ ತಾಲೂಕಿನ ಹರ್ಲಾಪುರದ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಮತ್ತು ಜನಪದ ಫೌಂಡೇಷನ್ ಕಲಾ ತಂಡಗಳಿಂದ ಬೀದಿನಾಟಕ ಮತ್ತು ಜನಪದ ಗೀತೆಗಳ ಪ್ರದರ್ಶನ ಜರುಗಿದವು.
ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿ ಇಂದು ಬೆಳಗ್ಗೆ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಪ್ರತಿ ಕುಟುಂಬದಲ್ಲಿ ದ್ವಿಚಕ್ರ ವಾಹನಗಳಿವೆ. ನಿತ್ಯ ಹೆಲ್ಮೇಟ್ ಬಳಸುವುದನ್ನು ಕಡ್ಡಾಯವಾಗಿ ರೂಢಿಸಿಕೊಳ್ಳಬೇಕು. ರಸ್ತೆ ದಾಟುವಾಗ, ಬಸ್ ಹತ್ತುವಾಗ, ಇಳಿಯುವಾಗ, ವಾಹನ ಚಾಲನೆ ಮಾಡುವಾಗ ಯಾವುದೇ ಅಪಾಯವಿಲ್ಲದಂತೆ ಎಚ್ಚರವಹಿಸಬೇಕು ಎಂದರು.
31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಕುಂದಗೋಳ ತಾಲೂಕಿನ ಹರ್ಲಾಪುರದ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಮತ್ತು ಜನಪದ ಫೌಂಡೇಷನ್ ಕಲಾ ತಂಡಗಳಿಂದ ಬೀದಿನಾಟಕ ಮತ್ತು ಜನಪದ ಗೀತೆಗಳ ಪ್ರದರ್ಶನ ಜರುಗಿದವು.