ಹುಬ್ಬಳ್ಳಿ:ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿನ್ನೆ ಒಂದೇ ದಿನದಲ್ಲಿ ಸಂಚಾರಿ ಪೊಲೀಸರು 1534 ಕೇಸ್ಗಳನ್ನ ದಾಖಲಿಸಿ, ಒಟ್ಟು 2,74,850 ರೂ. ದಂಡ ವಸೂಲಿ ಮಾಡಲಾಗಿದೆ.
ಸಂಚಾರಿ ನಿಯಮ ಉಲ್ಲಂಘನೆ.. ಒಂದೇ ದಿನದಲ್ಲಿ 1534 ಕೇಸ್ ದಾಖಲು.. - Traffic rule Violation
ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿನ್ನೆ ಒಂದೇ ದಿನದಲ್ಲಿ ಸಂಚಾರಿ ಪೊಲೀಸರು 1534 ಕೇಸ್ಗಳನ್ನ ದಾಖಲಿಸಿ, ಒಟ್ಟು 2,74,850 ರೂ. ದಂಡ ವಸೂಲಿ ಮಾಡಲಾಗಿದೆ.
ಸಂಚಾರಿ ನಿಯಮ ಉಲ್ಲಂಘನೆ...ಒಂದೇ ದಿನದಲ್ಲಿ 1534 ಕೇಸ್ ದಾಖಲು
ಮುಂದಿನ ದಿನಗಳಲ್ಲಿ ಈ ದಂಡ ವಸೂಲಿ ಮಾಡುವ ಹಣದ ಪ್ರಮಾಣ ಹೆಚ್ಚಾಗಲಿದೆ. ಪರಿಷ್ಕೃತ ದಂಡ ದುಪ್ಪಟ್ಟಾಗಿದ್ದು, ಇದೇ ರೀತಿ ದಂಡ ವಸೂಲಿ ಮಾಡಿದ್ರೇ ಒಂದು ದಿನಕ್ಕೆ ಸುಮಾರು 5 ಲಕ್ಷ ದಂಡ ವಸೂಲಿ ಮಾಡಬಹುದು. ಆದರೆ, ಪೊಲೀಸ್ ಇಲಾಖೆ ಕೇವಲ ಸಂಚಾರ ನಿಯಮ ಉಲ್ಲಂಘನೆ, ಹೆಲ್ಮೆಟ್ ಧರಿಸದೆ ಇರುವುದು ಹಾಗೂ ದಾಖಲಾತಿ ಇಲ್ಲದ ವಾಹನಗಳಿಗೆ ದಂಡ ವಿಧಿಸುವ ಕೆಲಸ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಪೊಲೀಸರು ವಾಹನ ಸವಾರರಿಗೆ ಸಂಚಾರ ನಿಯಮ ಉಲ್ಲಂಘಿಸದಂತೆ ಜಾಗೃತಿ ಮೂಡಿಸುವುದರತ್ತ ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.