ಹುಬ್ಬಳ್ಳಿ: ಸದಾ ಟ್ರಾಫಿಕ್ ಜಾಮ್ ನಿಯಂತ್ರಣ, ನಿಯಮ ಕೇಸ್ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ಜಡಿಯುವ ಪೊಲೀಸರಲ್ಲೂ ಮಾನವೀಯ ಗುಣ ಇದೆ. ಇದಕ್ಕೆ ಸಾಕ್ಷಿಯಂತಿದೆ ನಗರದಲ್ಲಿ ನಡೆದಿರುವ ಘಟನೆ. ವಾಹನ ಚಲಾಯಿಸುವಾಗ ಮೂರ್ಛೆರೋಗ ಬಂದು ಒದ್ದಾಡುತ್ತಿದ್ದ ವ್ಯಕ್ತಿಯನ್ನು ಇಲ್ಲಿನ ಟ್ರಾಫಿಕ್ ಪೊಲೀಸರು ರಕ್ಷಿಸಿ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ವಾಹನ ಚಲಾಯಿಸುವಾಗ ಮೂರ್ಛೆ ಬಂದು ಒದ್ದಾಡಿದ ಚಾಲಕ: ಆರೈಕೆ ಮಾಡಿ ಮಾನವೀಯತೆ ಮೆರೆದ ಪೊಲೀಸ್ - Hubli News 2021
ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ನಲ್ಲಿ ವ್ಯಕ್ತಿವೋರ್ವ ಗೂಡ್ಸ್ ಆಟೋವನ್ನು ಚಾಲನೆ ಮಾಡುತ್ತಿರುವಾಗೆ ಏಕಾಏಕಿ ಮೂರ್ಛೆ(ಪಿಡ್ಸ್) ಬಂದಿದೆ. ಆತನನ್ನು ಇಲ್ಲಿನ ಟ್ರಾಫಿಕ್ ಪೊಲೀಸರು ಆತನಿಗೆ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ವ್ಯಕ್ತಿಯನ್ನು ರಕ್ಷಿಸಿದ ಪೊಲೀಸರು
ನಗರದ ಚೆನ್ನಮ್ಮ ಸರ್ಕಲ್ನಲ್ಲಿ ವ್ಯಕ್ತಿವೋರ್ವ ಗೂಡ್ಸ್ ಆಟೋವನ್ನು ಚಾಲನೆ ಮಾಡುತ್ತಿರುವಾಗ ಏಕಾಏಕಿ ಪಿಡ್ಸ್ ಬಂದಿದೆ. ಹೀಗಾಗಿ ಆಟೋವನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಲು ಮುಂದಾಗಿದ್ದಾನೆ. ಇದನ್ನು ನೋಡಿದ ಹುಬ್ಬಳ್ಳಿಯ ಪೂರ್ವ ಸಂಚಾರಿ ಠಾಣೆಯ ಪೊಲೀಸರು ಕೂಡಲೇ ಆತನ ನೆರವಿಗೆ ಧಾವಿಸಿ, ಕೈಗೆ ಕಬ್ಬಿಣದ ವಸ್ತು ಕೊಟ್ಟು ಆತನನ್ನು ರಕ್ಷಿಸಿದ್ದಾರೆ.
ವ್ಯಕ್ತಿಯ ಸಹಾಯಕ್ಕೆ ಧಾವಿಸಿ ಆತನ ಅರೈಕೆ ಮೆರೆದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.