ಕರ್ನಾಟಕ

karnataka

ETV Bharat / state

ಅವಳಿನಗರಕ್ಕೆ 2ನೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ... ಪ್ರೇಕ್ಷಕರು ಪುಲ್ ಖುಷ್

ಈ ಬಾರಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಕ್ರೀಡಾಂಗಣದಲ್ಲಿ ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವೆ ಮೇ 31 ರಿಂದ ಜೂನ್‌ 3 ರವರೆಗೆ ಒಂದು ಟೆಸ್ಟ್‌ ಹಾಗೂ ಜೂ. 13, 15 ರಂದು ಎರಡು ಏಕದಿನ ಪಂದ್ಯಗಳು ನಡೆಯಲಿವೆ. ಶ್ರೀಲಂಕಾ ತಂಡ ಹುಬ್ಬಳ್ಳಿಯಲ್ಲಿ ಪ್ರಥಮ ಬಾರಿಗೆ ಆಡಲು ಆಗಮಿಸುತ್ತಿದೆ.

hubli

By

Published : May 30, 2019, 5:54 PM IST

Updated : May 30, 2019, 6:16 PM IST

ಹುಬ್ಬಳ್ಳಿ: 2013 ರಲ್ಲಿ ಭಾರತ ಮತ್ತು ವೆಸ್ಟ್‌ ಇಂಡೀಸ್‌ ಎ ತಂಡಗಳ ನಡುವಿನ ಪಂದ್ಯದ ಮೂಲಕ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆತಿಥ್ಯ ವಹಿಸಿದ್ದ ವಾಣಿಜ್ಯನಗರಿ ಹುಬ್ಬಳ್ಳಿ ಏಳು ವರ್ಷಗಳ ನಂತರ ಎರಡನೇ ಬಾರಿಗೆ ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ನಡೆಯಲಿದ್ದು ಹುಬ್ಬಳ್ಳಿ ಜನತೆ ಪಂದ್ಯ ವೀಕ್ಷಣೆ ಮಾಡಲು ಕಾತುರರಿಂದ ಕಾಯುತ್ತಿದ್ದಾರೆ.

ಈ ಬಾರಿ ರಾಜನಗರದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಕ್ರೀಡಾಂಗಣದಲ್ಲಿ ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವೆ ಮೇ 31 ರಿಂದ ಜೂನ್‌ 3 ರವರೆಗೆ ಒಂದು ಟೆಸ್ಟ್‌ ಹಾಗೂ ಜೂ. 13, 15 ರಂದು ಎರಡು ಏಕದಿನ ಪಂದ್ಯಗಳು ನಡೆಯಲಿವೆ. ಶ್ರೀಲಂಕಾ ತಂಡ ಹುಬ್ಬಳ್ಳಿಯಲ್ಲಿ ಪ್ರಥಮ ಬಾರಿಗೆ ಆಡಲು ಆಗಮಿಸುತ್ತಿದೆ.

ಹುಬ್ಬಳ್ಳಿ ಕೆಎಸಿಎ

2 ಟೆಸ್ಟ್‌, ಐದು ಏಕದಿನ ಪಂದ್ಯ:

ಶ್ರೀಲಂಕಾ ತಂಡ ಒಂದು ತಿಂಗಳ ಪ್ರವಾಸಕ್ಕೆ ಭಾರತಕ್ಕೆ ಆಗಮಿಸಿದ್ದು, ಬೆಳಗಾವಿಯಲ್ಲಿ ಅಭ್ಯಾಸ ನಡೆಸುತ್ತಿದೆ. ಈ ಪ್ರವಾಸದಲ್ಲಿ ಉಭಯ ತಂಡಗಳು 2 ಟೆಸ್ಟ್‌ ಪಂದ್ಯಗಳು ಹಾಗೂ ಐದು ಏಕದಿನ ಕ್ರಿಕೆಟ್‌ ಪಂದ್ಯಗಳನ್ನು ಆಡಲಿವೆ. ಬೆಳಗಾವಿಯಲ್ಲಿ ಮೇ 25 ರಿಂದ 28 ರವರೆಗೆ ಟೆಸ್ಟ್‌ ಪಂದ್ಯ ಹಾಗೂ ಜೂ.6, 8, 10 ರಂದು ಮೂರು ಏಕದಿನ ಪಂದ್ಯಗಳು ಆಡಿದ ಬಳಿಕ ಉಭಯ ತಂಡದ ಆಟಗಾರರು ಹುಬ್ಬಳ್ಳಿಗೆ ಆಗಮಿಸಿ ಒಂದು ಟೆಸ್ಟ್‌ ಹಾಗೂ 2 ಏಕದಿನ ಪಂದ್ಯ ಆಡಲಿವೆ.

7 ವರ್ಷ ನಂತರ ಅವಕಾಶ:

ಭಾರತ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು 2013ರಲ್ಲಿ ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನದಲ್ಲಿ 3 ಟೆಸ್ಟ್‌, 3 ಏಕದಿನ ಪಂದ್ಯಗಳು ಹಾಗೂ ಒಂದು ಟ್ವೆಂಟಿ-20 ಪಂದ್ಯವನ್ನಾಡಿದ್ದವು. ಸರಣಿಯ ಮೂರನೇ ಟೆಸ್ಟ್‌ನಲ್ಲಿ ಭಾರತ ತಂಡದ ಸ್ಟಾರ್‌ ಆಟಗಾರರಾಗಿದ್ದ ವೀರೇಂದ್ರ ಸೆಹ್ವಾಗ್‌, ಗೌತಮ್‌ ಗಂಭೀರ್‌, ಜಹೀರ್‌ ಖಾನ್‌ ಹಾಗೂ ಭಾರತ ತಂಡದ ಆರಂಭಿಕ ಆಟಗಾರ ಚೇತೇಶ್ವರ ಪೂಜಾರ ಆಡಿದ್ದರು. ಇದೀಗ ಮತ್ತೆ ಹುಬ್ಬಳ್ಳಿಯಲ್ಲಿ ಮೇ 31 ರಿಂದ ನಡೆಯಲಿರುವ ಭಾರತ ಮತ್ತು ಶ್ರೀಲಂಕಾ ಎ ಕ್ರಿಕೆಟ್‌ ತಂಡಗಳ ನಡುವಿನ ಟೆಸ್ಟ್‌ ಪಂದ್ಯಕ್ಕೆ ಮೈದಾನ ಸಜ್ಜಾಗಿದೆ.

Last Updated : May 30, 2019, 6:16 PM IST

ABOUT THE AUTHOR

...view details