ಹುಬ್ಬಳ್ಳಿ:ತೀವ್ರ ಕುತೂಲಹ ಕೆರಳಿಸಿರುವ ಧಾರವಾಡ ಲೋಕಸಭಾ ಕ್ಷೇತ್ರದ ಜೊತೆಗೇ ಕುಂದಗೋಳ ವಿಧಾನಸಭಾ ಕ್ಷೇತ್ರದ ಪಚುನಾವಣೆಯ ಫಲಿತಾಂಶವೂ ನಾಳೆ ಹೊರಬೀಳಲಿದೆ.
ಲೋಕಸಭಾ ಅಖಾಡದಲ್ಲಿ ಬಿಜೆಪಿ ಪ್ರಹ್ಲಾದ್ ಜೋಶಿ ಮತ್ತು ಮೈತ್ರಿ ಅಭ್ಯರ್ಥಿ ವಿನಯ್ ಕುಲಕರ್ಣಿ ಮಧ್ಯೆ ನೇರ ಹಣಾಹಣಿ ಇದೆ. ಇತ್ತ ಕುಂದಗೋಳ ವಿಧಾನಸಭೆಯ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಹಾಗೂ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ ನಡುವೆ ನೇರ ಪೈಪೋಟಿ ಇದ್ದು ಅಂತಿಮವಾಗಿ ಗೆಲುವು ಯಾರಿಗೆ ಅನ್ನುವ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ.
ಪ್ರತಿಷ್ಠೆಯ ಪ್ರಶ್ನೆ:
ಕುಂದಗೋಳದ ಗೆಲುವು ಕೇವಲ ಕುಸುಮಾ ಹಾಗೂ ಚಿಕ್ಕನಗೌಡರ ಅವರಿಗೆ ಮಾತ್ರವಲ್ಲದೆ ಮೈತ್ರಿ ಹಾಗೂ ಬಿಜೆಪಿ ಪಕ್ಷದ ಮುಖಂಡರಿಗೂ ಸಹ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಚುನಾವಣೆ ಘೋಷಣೆಯಾಗಿದ್ದ ದಿನದಿಂದ ಕುಂದಗೋಳದಲ್ಲಿ ಬೀಡು ಬಿಟ್ಟಿದ್ದ ಮೈತ್ರಿ ಹಾಗೂ ಕಮಲ ಪಡೆಯ ನಾಯಕರ ಶ್ರಮದ ಪ್ರತಿಫಲ ನಾಳೆ ಗೊತ್ತಾಗಲಿದೆ. ಈ ಕಾರಣದಿಂದಾಗಿಯೇ ಕ್ಷೇತ್ರವನ್ನು ಬಿಟ್ಟುಕೊಡಬಾರದು ಎಂಬ ಉದ್ದೇಶದಿಂದ ಪ್ರಚಾರಕ್ಕಾಗಿ ಪಕ್ಷದ ಪ್ರಭಾವಿ ನಾಯಕರ ದಂಡೇ ಕ್ಷೇತ್ರದೆಡೆಗೆ ಹರಿದು ಬಂದಿದ್ದರು.