ಧಾರವಾಡ:ನಾಳೆ ಧಾರವಾಡಕ್ಕೆ ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ಅವರು ಭೇಟಿ ನೀಡಲಿದ್ದಾರೆ.
ಧಾರವಾಡ: ಹಾಸಿಗೆ ಹಿಡಿದ ಬಿಇಓ ಮನೆಗೆ ನಾಳೆ ಸಚಿವ ಸುರೇಶ್ ಕುಮಾರ್ ಭೇಟಿ - ಧಾರವಾಡ
ಅನಾರೋಗ್ಯದಿಂದ ಹಾಸಿಗೆ ಹಿಡಿದು ಮಲಗಿರುವ ಡಯಟ್ನ ಹಿರಿಯ ಉಪನ್ಯಾಸಕರಾದ ಮಹದೇವ ಬ.ಮಾಳಗಿ ಅವರ ಮನೆಗೆ ನಾಳೆ ಬೆಳಿಗ್ಗೆ 11ಕ್ಕೆ ಸಚಿವ ಸುರೇಶ್ ಕುಮಾರ್ ಭೇಟಿ ನೀಡಲಿದ್ದಾರೆ.
ಸಚಿವ ಸುರೇಶ್ ಕುಮಾರ್
ಅನಾರೋಗ್ಯದಿಂದ ಹಾಸಿಗೆ ಹಿಡಿದು ಮಲಗಿರುವ ಡಯಟ್ನ ಹಿರಿಯ ಉಪನ್ಯಾಸಕರಾದ ಮಹದೇವ ಬ.ಮಾಳಗಿ ಅವರ ಮನೆಗೆ ಬೆಳಿಗ್ಗೆ 11ಕ್ಕೆ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಲಿದ್ದಾರೆ.
ನಂತರ ಡಯಟ್ ಆವರಣದಲ್ಲಿರುವ ಸಿಸ್ಲೆಪ್ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಧಾರವಾಡ ಶಹರ ಮತ್ತು ಜಿಲ್ಲೆಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನ ಪರಿಶೀಲನೆ ನಡೆಸಿ ನಂತರ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ತೆರಳಲಿದ್ದಾರೆ.