ಹುಬ್ಬಳ್ಳಿ:ಸಿಬಿಐ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ನಾನು ಗೊತ್ತಿರುವುದನ್ನು ಹೇಳಿದ್ದೇನೆ. ನಂಗೆ ಇವತ್ತು ಸಿಬಿಐ ಅಧಿಕಾರಿಗಳು ಕೇವಲ ಮಲ್ಲಮ್ಮಳನ್ನ ಪಕ್ಷ ಸೇರ್ಪಡೆ ವಿಚಾರವಾಗಿ ಪ್ರಶ್ನೆ ಮಾಡಿದ್ರು. ಅದಕ್ಕೆ ನಾನು ಉತ್ತರ ನೀಡಿದ್ದೇನೆ ಎಂದು ಕೆಪಿಸಿಸಿ ಕಾರ್ಯದರ್ಶಿ ನಾಗರಾಜ್ ಗೌರಿ ಹೇಳಿದರು.
ವಿಚಾರಣೆ ಬಳಿಕ ಮಾಧ್ಯಮಗಳ ಬಳಿ ಮಾತನಾಡಿದ ಅವರು, ನನ್ನ ಬಳಿ ಸುರೇಶ್ ಗೌಡ ಹಾಗೂ ಶಿವಾನಂದ ಕರಿಗಾರ ಮಲ್ಲಮ್ಮಳನ್ನ ಪಕ್ಷ ಸೇರ್ಪಡೆ ಮಾಡಿಕೊಳ್ಳುವಂತೆ ಹೇಳಿದ್ರು. ಅಲ್ಲದೇ ನನ್ನ ಬಳಿಯೂ ಬಂದ ಮಲ್ಲಮ್ಮ ಕಣ್ಣೀರಿಟ್ಟಿದ್ದಳು. ಆದ್ರೆ ವಿನಯ್ ಕುಲಕರ್ಣಿ ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಶಿವಾನಂದ ಕರಿಗಾರ ನೇತೃತ್ವದಲ್ಲಿ ಕುರುಬ ಸಮಾಜದ ಮುಖಂಡರೊಂದಿಗೆ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ್ದಳು. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದಳು. ಆವಾಗ ನಾನು ಹುಬ್ಬಳ್ಳಿ ಜಿಲ್ಲಾ ಪಂಚಾಯತ್ ಉಸ್ತುವಾರಿಯಾಗಿದ್ದೆ. ಅದಕ್ಕೆ ಪಕ್ಷ ಸೇರ್ಪಡೆ ಬಗ್ಗೆ ನಾನು ಮಾತುಕತೆ ನಡೆಸಿದ್ದೆ. ನಮ್ಮ ಮನೆಯಲ್ಲೆ ವಿನಯ್ ಕುಲಕರ್ಣಿ ಮಾಡಿಸಿದ್ದು ನಿಜ. ಇದನ್ನೆಲ್ಲವನ್ನ ನಾನು ಸಿಬಿಐ ಅಧಿಕಾರಿಗಳಿಗೆ ಉತ್ತರ ನೀಡಿದ್ದೇನೆ.