ಧಾರವಾಡ:ವಿಧಾನಸಭಾ ಚುನಾವಣೆಯಲ್ಲಿ ತನ್ನದೇಯಾದ ವೈಶಿಷ್ಟ್ಯ ಹೊಂದಿರುವ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಈಗಿನಿಂದಲೇ ಟಿಕೆಟ್ ಫೈಟ್ ಏರ್ಪಟ್ಟಿದೆ. ಹಾಲಿ ಶಾಸಕ ಅಮೃತ ದೇಸಾಯಿ ಹಾಗೂ ಬಯಲು ಸೀಮೆ ನಿಗಮ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ ಇವರಿಬ್ಬರ ಮಧ್ಯೆ ಟಿಕೆಟ್ ವಾರ್ ನಡೆದಿದೆ.
ಶಾಸಕ ಅಮೃತ ದೇಸಾಯಿ ಅವರು ಮಾತನಾಡಿದರು ಧಾರವಾಡ ಗ್ರಾಮೀಣ ಶಾಸಕ ಅಮೃತ್ ದೇಸಾಯಿ ಹಾಗೂ ತವಣಪ್ಪ ಅಷ್ಟಗಿ ಬಿಜೆಪಿ ಟಿಕೆಟ್ಗಾಗಿ ಫೈಟ್ ಶುರುವಾಗಿದ್ದು, ಗ್ರಾಮೀಣ ಭಾಗದ ಜನರು ಬದಲಾವಣೆ ಬಯಸಿದ್ದಾರೆ. ಹೀಗಾಗಿ ಪಕ್ಷದ ಮುಖಂಡರು ನನಗೆ ಟಿಕೆಟ್ ನೀಡುತ್ತಾರೆ ಎಂಬ ವಿಶ್ವಾಸವನ್ನು ಅಷ್ಟಗಿ ಹೊಂದಿದ್ದಾರೆ.
2019 ರಲ್ಲಿ ಮುಂಬರುವ ಟಿಕೆಟ್ಗಾಗಿ ಮಾತುಕತೆ ನಡೆದಿತ್ತು. ಇಬ್ಬರನ್ನು ಮನವೊಲಿಸಿ ಒಬ್ಬರಿಗೆ ಒಂದೊಂದು ಚಾನ್ಸ್ ನೀಡುವ ಭರವಸೆಯನ್ನು ಬಿಜೆಪಿ ಮುಖಂಡರು ನೀಡಿದ್ದರು ಎಂದು ಕೂಡ ಹೇಳಲಾಗುತ್ತಿದೆ. 2019ಕ್ಕೆ ಗ್ರಾಮೀಣ ಕ್ಷೇತ್ರದಿಂದ ಅಮೃತ್ ದೇಸಾಯಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ವಿರುದ್ದ ಜಯಶಾಲಿಯಾಗಿದ್ದರು.
ಸದ್ಯ ಇದೀಗ ಮುಂದಿನ ಚುನಾವಣೆಗೆ ತವಣಪ್ಪ ಅಷ್ಟಗಿ ಟಿಕೆಟ್ ನೀಡೋದಾಗಿ ಭರವಸೆ ಕೂಡ ನೀಡಿದ್ದಾರೆ. ಒಂದು ಕಡೆ ಹಾಲಿ ಶಾಸಕರಿಗೆ ಟಿಕೆಟ್ ನೀಡ್ತಾರೆ ಎಂದು ಶಾಸಕ ಅಮೃತ್ ದೇಸಾಯಿ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಅಮೃತ್ ದೇಸಾಯಿ ಹಾಗೂ ತವಣಪ್ಪ ಅಷ್ಟಗಿ ಮದ್ಯೆ ಟಿಕೆಟ್ ಫೈಟ್ ನಡೆದಿದೆ. ಚುನಾವಣೆ ಹೊತ್ತಿಗೆ ಇನ್ನಷ್ಟು ಆಕಾಂಕ್ಷಿಗಳು ಹುಟ್ಟಿಕೊಂಡರೂ ಆಶ್ಚರ್ಯ ಪಡಬೇಕಾಗಿಲ್ಲ.
ಓದಿ:ಹುಬ್ಬಳ್ಳಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗೌನ್ ಗದ್ದಲ: ಅನಿಷ್ಟಾವಧಿವರೆಗೆ ಸಭೆ ಮುಂದೂಡಿಕೆ