ಕರ್ನಾಟಕ

karnataka

ETV Bharat / state

ಧಾರವಾಡದಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣ... ಸಾವಿಗೆ ಕಾರಣವಾಯ್ತಾ ಕೊರೊನಾ ಭೀತಿ!? - Dharwad latest news

ಮನೆಯಲ್ಲಿ ಪತ್ನಿ, ಮಗಳಿಗೆ ಕೊರೊನಾ ಲಕ್ಷಣ ಕಂಡು ಬಂದಿತ್ತು ಎನ್ನಲಾಗಿದೆ. ಸ್ಥಳೀಯ ವೈದ್ಯರೊಬ್ಬರ ಬಳಿ ಮೌನೇಶ ಚಿಕಿತ್ಸೆಗೆ ತೆರಳಿದ್ದಾರೆ. ವೈದ್ಯರು ಪತ್ನಿಗೆ ಲೋ ಬಿಪಿ ಮತ್ತು ಮಗಳಿಗೆ ಜ್ವರ ಲಕ್ಷಣ‌ ಇದೆ ಎಂದಿದ್ದರಂತೆ. ಮಗಳ ಜ್ವರ ಕಡಿಮೆಯಾಗದಿದ್ದಾಗ ಆತನಲ್ಲಿ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

Dharwad
ಆತ್ಮಹತ್ಯೆ

By

Published : Jul 25, 2020, 12:01 PM IST

Updated : Jul 25, 2020, 1:31 PM IST

ಧಾರವಾಡ: ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಕೊರೊನಾ ಭೀತಿ ಕಾರಣವಾಯ್ತಾ ಎಂಬ ಪ್ರಶ್ನೆ ಮೂಡಿದೆ. ಮೃತ ಮೌನೇಶ ಬರೆದಿಟ್ಟದ್ದಾರೆ ಎನ್ನಲಾದ ಡೆತ್​ನೋಟ್‌ನಲ್ಲಿ ಕೊರೊನಾ ಬಗ್ಗೆ ಪ್ರಸ್ತಾಪ ಮಾಡಲಾಗಿದೆ.

ಮೃತರ ಸಾವಿನ ಕುರಿತು ಮಾಹಿತಿ ನೀಡಿದ ಮನೆ ಮಾಲೀಕ

ಮನೆಯಲ್ಲಿ ಪತ್ನಿ, ಮಗಳಿಗೆ ಕೊರೊನಾ ಲಕ್ಷಣ ಕಂಡು ಬಂದಿತ್ತು ಎನ್ನಲಾಗಿದೆ. ಸ್ಥಳೀಯ ವೈದ್ಯರೊಬ್ಬರ ಬಳಿ ಮೌನೇಶ ಚಿಕಿತ್ಸೆಗೆ ತೆರಳಿದ್ದಾರೆ. ವೈದ್ಯರು ಪತ್ನಿಗೆ ಲೋ ಬಿಪಿ ಮತ್ತು ಮಗಳಿಗೆ ಜ್ವರ ಲಕ್ಷಣ‌ ಇದೆ ಎಂದಿದ್ದರಂತೆ. ಮಗಳ ಜ್ವರ ಕಡಿಮೆಯಾಗದಿದ್ದಾಗ ಆತನಲ್ಲಿ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಮೌನೇಶ್​ ಪತ್ತಾರ

ಪೊಲೀಸರು ಡೆತ್​​ನೋಟ್​​ ವಶಕ್ಕೆ ಪಡೆದುಕೊಂಡಿದ್ದಾರೆ. ಕೊರೊನಾ ಭಯ ಎಂದು ಬರೆದಿರುವ ಬಗ್ಗೆ ಸಂಬಂಧಿಗಳು ಹೇಳಿದ್ದಾರೆ. ಡೆತ್​ನೋಟ್ ಬಗ್ಗೆ ಸಂಬಂಧಿಗಳು ಮಾಹಿತಿ ನೀಡಿದ್ದಾರೆ.

Last Updated : Jul 25, 2020, 1:31 PM IST

ABOUT THE AUTHOR

...view details