ಹುಬ್ಬಳ್ಳಿ:ಅಲ್ಪಸಂಖ್ಯಾತ ಮತದಾರರು ಹೆಚ್ಚಿರುವ ಕ್ಷೇತ್ರಗಳಲ್ಲಿ ಆ್ಯಪ್ ಮೂಲಕ ಸರ್ವೇ ಮಾಡುತ್ತಿದ್ದ ಆರೋಪದಡಿ ಮೂವರನ್ನು ಕಾಂಗ್ರೆಸ್ ಮುಖಂಡರು ಹಿಡಿದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ನಡೆದಿದೆ.
ಅಲ್ಪಸಂಖ್ಯಾತ ಮತದಾರರಿರುವ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಹಾಗೂ ಪಶ್ಚಿಮ ಮತದಾರರಿರುವ ಹುಬ್ಬಳ್ಳಿಯ ಆನಂದ್ ನಗರದಲ್ಲಿ ಮೂವರು ಸರ್ವೇ ನಡೆಸುತ್ತಿದ್ದರು. ಆಗ ಅನುಮಾನ ಬಂದ ಕೂಡಲೇ ಕಾಂಗ್ರೆಸ್ ಮುಖಂಡರಾದ ರಜತ್ ಉಳ್ಳಾಗಡ್ಡಿಮಠ ಹಾಗೂ ಆರೀಪ್ ಭದ್ರಾಪುರ ಅವರು ಸರ್ವೇ ಮಾಡುತ್ತಿದ್ದವರನ್ನು ವಿಚಾರಿಸಿದ್ದಾರೆ. ಆಗ ಸಮರ್ಪಕ ಉತ್ತರ ನೀಡದಿದ್ದಾಗ ಸರ್ವೇ ಮಾಡುತ್ತಿದ್ದ ಹರೀಶ್, ನಿತೇಶ್, ಮಂಜುನಾಥ್ ಅವರನ್ನು ಹಿಡಿದು ಹಳೇ ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮತದಾರರ ಮಾಹಿತಿ ಸಂಗ್ರಹ ಹುಬ್ಬಳ್ಳಿಯಲ್ಲಿ ಮತದಾರರ ಮಾಹಿತಿ ಸಂಗ್ರಹ ಹುಬ್ಬಳ್ಳಿಯಲ್ಲಿ ಮತದಾರರ ಮಾಹಿತಿ ಸಂಗ್ರಹ ಚಿಲುಮೆ ಮಾದರಿಯಲ್ಲಿ ಮಾಹಿತಿ ಸಂಗ್ರಹ ಆರೋಪ..
ಈ ಸರ್ವೇ ತಂಡ ಪ್ರೈವೇಟ್ ಲಿಮಿಟೆಡ್ವೊಂದರಿಂದ ಅನುಮತಿ ಪಡೆದಿದೆ. ಪ್ರಿ ಪೋಲ್ ಸರ್ವೇ ಮಾಡೋದಾಗಿ ಹುಬ್ಬಳ್ಳಿ- ಧಾರವಾಡ ಕಮೀಷನರ್ ಅವರಿಂದ ಸ್ವೀಕೃತಿ ಪತ್ರ ಪಡೆದುಕೊಂಡಿದೆ. ಇದೊಂದು ಚಿಲುಮೆ ಮಾದರಿಯ ಪ್ರಕರಣ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕ ರಜತ್ ಉಳ್ಳಾಗಡ್ಡಿಮಠ ಅವರು ಮಾತನಾಡಿದರು ಇದು ಅಲ್ಪಸಂಖ್ಯಾತ ಮತಗಳ ಡಿಲೀಟ್ ಮಾಡುವ ಹುನ್ನಾರ. ಬಿಜೆಪಿ ನಾಯಕರು ಸೋಲಿನ ಭಯದಿಂದ ಸರ್ವೇ ಮಾಡಿಸುತ್ತಿದ್ದಾರೆ. ಈ ಬಗ್ಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುವಂತೆ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.
ಓದಿ:ಚಿಲುಮೆ ಕೇಸ್.. ನಾಲ್ಕನೇ ಆರೋಪಿ ಅರೆಸ್ಟ್