ಕರ್ನಾಟಕ

karnataka

ETV Bharat / state

ಮೂರು ದಿನಗಳ ರೈತ ಜಾತ್ರೆಗೆ ಅದ್ಧೂರಿ ತೆರೆ: ಐದು ಲಕ್ಷ ಜನರು ಭಾಗಿ - Dharwad Agricultural University

ಕೃಷಿ ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ನಡೆದ ಕೃಷಿಮೇಳ ಸಮಾರೋಪಗೊಂಡಿದೆ. ಒಟ್ಟು ಮೂರು ದಿನಗಳ ರೈತರ ಜಾತ್ರೆಗೆ ಐದು ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಆದರೆ, ಕಳೆದ ವರ್ಷದ ಮೇಳಕ್ಕೆ ಹೋಲಿಸಿದರೆ ಮೇಳಕ್ಕೆ ಆಗಮಿಸಿದವರ ಸಂಖ್ಯೆ ಇಳಿಮುಖವಾಗಿತ್ತು.

Three-day Dharavada Krishi mela wind up today
ಮೂರು ದಿನಗಳ ಕಾಲ‌ ನಡೆದ ರೈತ ಜಾತ್ರೆ ಮುಕ್ತಾಯ: ಐದು ಲಕ್ಷ ಜನ ಭಾಗಿ

By

Published : Jan 20, 2020, 9:38 PM IST

ಧಾರವಾಡ: ಕೃಷಿ ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ನಡೆದ ಕೃಷಿಮೇಳ ಸಮಾರೋಪಗೊಂಡಿದೆ. ಒಟ್ಟು ಮೂರು ದಿನಗಳ ರೈತರ ಜಾತ್ರೆಗೆ ಐದು ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಆದರೆ, ಕಳೆದ ವರ್ಷದ ಮೇಳಕ್ಕೆ ಹೋಲಿಸಿದರೆ ಮೇಳಕ್ಕೆ ಆಗಮಿಸಿದವರ ಸಂಖ್ಯೆ ಇಳಿಮುಖವಾಗಿತ್ತು.

ಮೂರು ದಿನಗಳ ಕಾಲ‌ ನಡೆದ ರೈತ ಜಾತ್ರೆ ಮುಕ್ತಾಯ: ಐದು ಲಕ್ಷ ಜನ ಭಾಗಿ

ಅತಿಯಾದ ಮಳೆಯಿದ್ದ ಕಾರಣ ನಾಲ್ಕು ತಿಂಗಳು ವಿಳಂಬವಾಗಿ ಮೇಳ ನಡೆದಿರುವ ಹಿನ್ನೆಲೆ ರೈತರ ಸಂಖ್ಯೆ ಕಡಿಮೆಯಾಗಿತ್ತು‌.‌ ಉಳಿದಂತೆ ಕೃಷಿ ಮೇಳ ರೈತರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಮೇಳದಲ್ಲಿ ಜಾನುವಾರು ಪ್ರದರ್ಶನ ವಿಭಾಗದಲ್ಲಿ ಹೈನುಗಾರಿಕೆ, ಮೇಕೆ ಸಾಕಣೆ, ಕುಕ್ಕುಟ ಉದ್ಯಮದ ಮಾಹಿತಿಯನ್ನು ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ತಳಿಯ ಜಾನುವಾರಗಳ ಮೂಲಕ ರೈತರಿಗೆ ನೀಡಲಾಯಿತು. ಅಲ್ಲದೇ, ಕುದುರೆಗಳು, ಕುರಿ, ಟಗರು, ಎಮ್ಮೆ, ಆಕಳು, ಎತ್ತುಗಳನ್ನ ಪ್ರದರ್ಶನಕ್ಕೆ ಇಡಲಾಗಿತ್ತು.

ಇನ್ನು ಹಿಂಗಾರು ಹಂಗಾಮು ಕೂಡ ಮುಗಿದು ಹೋಗಿರುವ ನಂತರ ಮೇಳ ನಡೆದ ಹಿನ್ನೆಲೆ ರೈತರಿಗೆ ಬೇರೆ ಬೇರೆ ತಳಿಯ ಬೆಳೆ ಪ್ರಾತ್ಯಕ್ಷಿಕೆ ತೋರಿಸಲು ಸಾಧ್ಯವಾಗಲಿಲ್ಲ. ’ಪ್ರತಿ ಹನಿ ಸಮೃದ್ಧ ತೆನಿ’ ಎಂಬ ಘೋಷ ವಾಕ್ಯದೊಂದಿಗೆ ನಡೆದ ಮೇಳದಲ್ಲಿನ ಪ್ರದರ್ಶನ ಮಾದರಿಗಳು ಹಾಗೂ ವಿಚಾರ ಸಂಕಿರಣಗಳು ರೈತರಿಗೆ ಮಣ್ಣು ಹಾಗೂ ನೀರಿನ ಮಹತ್ವ ಸಾರಿದವು.

ABOUT THE AUTHOR

...view details