ಕರ್ನಾಟಕ

karnataka

ETV Bharat / state

ವಾಣಿಜ್ಯ ನಗರಿಯಲ್ಲಿ ಖೋಟಾ ನೋಟು ಜಾಲ ಪತ್ತೆ: ಮೂವರ ಬಂಧನ.. - ವಾಣಿಜ್ಯ ನಗರಿಯಲ್ಲಿ ಖೋಟಾ ನೋಟು ಜಾಲ ಪತ್ತೆ

ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿ, ಆರೋಪಿಗಳಿಂದ ನಕಲಿ ನೋಟುಗಳ ವಶ ಪಡಿಸಿಕೊಂಡಿರುವ ಘಟನೆ ನಡೆದಿದೆ.

Kn_hbl_02
ಉಪನಗರ ಪೊಲೀಸ್​ ಠಾಣೆ

By

Published : Oct 12, 2022, 6:56 PM IST

ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಖೋಟಾ ನೋಟಿನ ಹಾವಳಿ ಜೋರಾಗಿದ್ದು, ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಮೂವರನ್ನು ನಗರದ ಸನ್ಮಾನ ಲಾಡ್ಜ್​​​ನಲ್ಲಿ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಶಿವಾನಂದ ಕಾರಜೋಳ, ವಿಜಯಪುರದ ನಿವಾಸಿ ಕಲ್ಲಯ್ಯ ಪಟ್ಟದಮಠ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪೂರದ ಗುರುರಾಜ ಜಾಧವ್​ ಬಂಧಿತ ಆರೋಪಿಗಳು. ಉಪನಗರದ ಪೊಲೀಸರು ಖಚಿತ ಮಾಹಿತಿ ಪಡೆದು ಲಾಡ್ಜ್ ಮೇಲೆ ದಾಳಿ ನಡೆಸಿದ್ದಾರೆ.

ಈ ವೇಳೆ, 200 ರೂ. ಹಾಗೂ 100 ರೂ. ಮುಖ ಬೆಲೆಯ ಒಟ್ಟು 73 ನಕಲಿ ನೋಟ್‌ಗಳು ಹಾಗೂ ಎರಡು ಬಂಗಾರ ಬಣ್ಣದ ಲೋಹದ ವಸ್ತುಗಳು ಪತ್ತೆಯಾಗಿವೆ. ಖೋಟಾ ನೋಟಗಳನ್ನು ಬೇರೆಡೆಯಿಂದ ತಂದು ಚಲಾವಣೆ ಮಾಡುವ ಉದ್ದೇಶ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದು, ಬಂಧಿತರಿಂದ ಖೋಟಾ ನೋಟುಗಳನ್ನು ವಶ ಪಡಿಸಿಕೊಂಡಿದ್ದಾರೆ. ಇನ್ನು ಆರೋಪಿಗಳ ವಿರುದ್ದ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಖೋಟಾ ನೋಟು ಜಾಲ ಪತ್ತೆ: ವಿಜಯನಗರದಲ್ಲಿ ಐವರ ಬಂಧನ

ABOUT THE AUTHOR

...view details