ಕರ್ನಾಟಕ

karnataka

ETV Bharat / state

ಧಾರವಾಡ: ಅಕ್ಕಪಕ್ಕದ ಮನೆ ಲಾಕ್ ಮಾಡಿ ನಗ, ನಾಣ್ಯ ದೋಚಿದ ಖದೀಮರು - ಧಾರವಾಡ ಲೇಟೆಸ್ಟ್ ನ್ಯೂಸ್

ಪತ್ರೇಶ್ವರ ನಗರದ ನಿವಾಸಿ ಗೀತಾ ನಾಯ್ಕರ ಎಂಬುವವರ ಮನೆಯ ಅಕ್ಕಪಕ್ಕದ ಮನೆಗಳನ್ನು ಕಳ್ಳರು ಹೊರಗಿನಿಂದ ಲಾಕ್ ಮಾಡಿ, ಮನೆಯಲ್ಲಿದ್ದ ಚಿನ್ನಾಭರಣ, ಹಣ ದೋಚಿದ್ದಾರೆ.

darawada theft case
ಧಾರವಾಡ ಕಳ್ಳತನ ಪ್ರಕರಣ

By

Published : Jul 2, 2021, 5:20 PM IST

ಧಾರವಾಡ: ಲಾಕ್​ಡೌನ್​ ಅವಧಿಯಲ್ಲಿ ಕಡಿಮೆಯಾಗಿದ್ದ ಕಳ್ಳತನ ಪ್ರಕರಣಗಳು ಅನ್​ಲಾಕ್‌ ಬಳಿಕ ಹೆಚ್ಚಾಗುತ್ತಿದೆ. ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋದವರ ಮನೆಯ ಬೀಗ ಮುರಿದ ಕಳ್ಳರು, ನಗ ನಾಣ್ಯ ದೋಚಿದ ಘಟನೆ ಧಾರವಾಡದ ಪತ್ರೇಶ್ವರ ನಗರದಲ್ಲಿ ನಡೆದಿದೆ.

ಪತ್ರೇಶ್ವರ ನಗರದ ನಿವಾಸಿ ಗೀತಾ ನಾಯ್ಕರ ಎಂಬುವವರ ಮನೆಯಲ್ಲಿ ಕಳ್ಳರು ಕೃತ್ಯ ಎಸಗಿದ್ದಾರೆ. ಅಕ್ಕಪಕ್ಕದ ಮನೆಗಳನ್ನು ಹೊರಗಿನಿಂದ ಲಾಕ್ ಮಾಡಿ, 300 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ, 1.50 ಲಕ್ಷ ಹಣವನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ‌.

ಕಳ್ಳತನ ನಡೆದ ಮನೆಯವರು ಸಂಬಂಧಿಕರ ವಿವಾಹ ನಿಶ್ಚಿತಾರ್ಥಕ್ಕೆ ಹೋಗಿದ್ದರು. ಇಂದು ಬಂದು ನೋಡಿದಾಗ ಘಟನೆ ನಡೆದಿರುವುದು ಗೊತ್ತಾಗಿದೆ. ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನದಳದಿಂದ ಕಳ್ಳರ ಪತ್ತೆ ಕಾರ್ಯ ಮುಂದುವರೆದಿದೆ.

ಇದನ್ನೂ ಓದಿ:ಸೋಂಕು ಉಲ್ಭಣಗೊಳ್ಳದಂತೆ ಕ್ರಮ: ಮಂಗಳೂರು-ಕೇರಳ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ

ABOUT THE AUTHOR

...view details