ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ನಡೆಯಬೇಕಿದ್ದ ಹಿಂದೂ-ಮುಸ್ಲಿಂ ಭಾವೈಕ್ಯದ ಉರುಸ್ ಈ ಬಾರಿ ಲಾಕ್ಡೌನ್ ಹಿನ್ನೆಲೆ ಹಾಗೂ ಜನರ ಹಿತದೃಷ್ಟಿಯಿಂದ ವಿಜೃಂಭಣೆಯಿಂದ ಆಚರಿಸಲಾಗುತ್ತಿಲ್ಲ ಎಂದು ಊರುಸ್ ಕಮಿಟಿಯ ಸದಸ್ಯ ಹಜರತ್ ಹಾಜಿಪೀರ್ ಬಾಬಾರ ತಿಳಿಸಿದ್ದಾರೆ.
ಹಿಂದೂ ಮುಸ್ಲಿಂ ಭಾವೈಕ್ಯದ ಉರುಸ್ ಆಚರಣೆ ಈ ವರ್ಷ ಇಲ್ಲ - There is no Urus ritual due to corona virus
ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯದ ಪ್ರತೀಕವಾಗಿದ್ದ ಉರುಸ್ ಆಚರಣೆಯನ್ನು ಈ ಬಾರಿ ರದ್ದುಗೊಳಿಸಲಾಗಿದೆ ಎಂದು ಕಮೀಟಿ ಸದಸ್ಯ ಹಜರತ್ ತಿಳಿಸಿದ್ದಾರೆ.
ಹಿಂದೂ ಮುಸ್ಲಿಂ ಭಾವೈಕ್ಯದ ಉರುಸ್ ಆಚರಣೆ ಇಲ್ಲ
ದೇಶದ ತುಂಬ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿವೆ. ಅವುಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘನೆ ಮಾಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯಡಿಯೂರಪ್ಪರವರ ಮಾತಿಗೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದರು.
ಮುಂದಿನ ವರ್ಷ ಅದರ ಬಗ್ಗೆ ಗ್ರಾಮದ ಹಿರಿಯರ ಜೊತೆ ಮಾತಾನಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸದ್ಯ ನಮ್ಮ ಆರೋಗ್ಯದ ಮೇಲೆ ಗಮನ ಹರಿಸಬೇಕು ಹೀಗಾಗಿ ಎಲ್ಲರೂ ಲಾಕ್ಡೌನ್ ನಿಯಮಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.