ಹುಬ್ಬಳ್ಳಿ: ಕೊರೊನಾ ಎಫೆಕ್ಟ್ನಿಂದಾಗಿ ನಗರದಲ್ಲಿ ಗಣೇಶ ಮೂರ್ತಿ ಖರೀದಿ ಭರಾಟೆ ನೀರಸವಾಗಿದ್ದು, ಸಂಕಷ್ಟದ ನಡುವೆ ಗಣೇಶೋತ್ಸವ ಆಚರಿಸಲು ಜನರು ಹಿಂದೇಟು ಹಾಕಿದ್ದಾರೆ.
ಕೊರೊನಾ ಎಫೆಕ್ಟ್: ಹುಬ್ಬಳ್ಳಿಯಲ್ಲಿಲ್ಲ ಗಣೇಶ ಮೂರ್ತಿ ಖರೀದಿ ಭರಾಟೆ
ಕೊರೊನಾ ತಂದೊಡ್ಡಿದ ಸಂಕಷ್ಟದಿಂದಾಗಿ ಈ ಬಾರಿ ಗಣೇಶ ಚತುರ್ಥಿಯ ಮೆರುಗು ಇಲ್ಲದಂತಾಗಿದ್ದು, ಹುಬ್ಬಳ್ಳಿ ನಗರದಲ್ಲಿಯೂ ಸಹ ಗಣೇಶೋತ್ಸವದ ಸಂಭ್ರಮ ಕಳೆಗುಂದಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ವಿಧಿಸಿರುವ ಷರತ್ತುಗಳಿಂದಾಗಿ ಗಣೇಶ ಮಂಡಳಿಗಳಲ್ಲಿ ಗೊಂದಲ ಉಂಟಾಗಿದ್ದು, ಪ್ರತೀ ವರ್ಷ ನೆರವೇರುತ್ತಿದ್ದ ಸಾರ್ವಜನಿಕ ಗಣೇಶೋತ್ಸವ ಈ ಬಾರಿ ಇಲ್ಲದಂತಾಗಿದೆ. ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರೂ ಸಹ ಈ ಬಾರಿ ಅದ್ಧೂರಿ ಆಚರೆಣೆಗೆ ಬ್ರೇಕ್ ಹಾಕಿದ್ದಾರೆ.
ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಸ್ಥಾಪನೆಗೆ ಜನರಲ್ಲಿ ಉತ್ಸಾಹ ಕಡಿಮೆಯಾಗಿದ್ದು, ದುರ್ಗದ ಬೈಲ್, ಜನತಾ ಬಜಾರ್ ಮಾರಯಕಟ್ಟೆಗಳು ಬಿಕೋ ಎನ್ನುತ್ತಿವೆ. ಮನೆಯಲ್ಲಿ ಹಬ್ಬ ಆಚರಿಸುವ ಉತ್ಸಾಹದಲ್ಲಿನ ಜನರು ಮಾರುಕಟ್ಟೆಗೆ ಬಂದು ಗಣೇಶ ಮೂರ್ತಿ ಖರೀದಿಸುತ್ತಿದ್ದಾರೆ.