ಹುಬ್ಬಳ್ಳಿ: ದೇವಸ್ಥಾನಗಳಲ್ಲಿನ ಕಾಣಿಕೆ ಪೆಟ್ಟಿಗೆಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ನವನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ದೇವಸ್ಥಾನಗಳಲ್ಲಿ ಕಾಣಿಕೆ ಪೆಟ್ಟಿಗೆ ಕಳ್ಳತನ: ಆರೋಪಿ ಅರೆಸ್ಟ್ - ದೇವಸ್ಥಾನಗಳಲ್ಲಿನ ಕಾಣಿಗೆ ಪೆಟ್ಟಿಗೆ ಕಳ್ಳತನ
ನವನಗರ ಠಾಣೆ ಪೊಲೀಸರು ಕಾಣಿಕೆ ಪೆಟ್ಟಿಗೆ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಧಾರವಾಡ ತೇಜಸ್ವಿ ನಗರ ನಿವಾಸಿ ಮಹಾಂತೇಶ (30) ಬಂಧಿತ ಆರೋಪಿ.
![ದೇವಸ್ಥಾನಗಳಲ್ಲಿ ಕಾಣಿಕೆ ಪೆಟ್ಟಿಗೆ ಕಳ್ಳತನ: ಆರೋಪಿ ಅರೆಸ್ಟ್ accused Arrest](https://etvbharatimages.akamaized.net/etvbharat/prod-images/768-512-7841648-349-7841648-1593576972014.jpg)
ಮಹಾಂತೇಶ ಎತ್ತಿಮಮಠ ಬಂಧಿತ ಆರೋಪಿ
ಧಾರವಾಡ ತೇಜಸ್ವಿ ನಗರ ನಿವಾಸಿ ಮಹಾಂತೇಶ (30) ಬಂಧಿತ ಆರೋಪಿ. ಈತ ಭೈರಿದೇವರಕೊಪ್ಪ ಪಿಬಿ ರಸ್ತೆಗೆ ಹೊಂದಿಕೊಂಡಿರುವ ಶಿವಾನಂದ ಮಠದ ಕಾಣಿಕೆ ಪೆಟ್ಟಿಗೆಯನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ.
ಸದ್ಯ ಈತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಬಂಧಿತನಿಂದ 86,227 ಹಣವನ್ನು ವಶಪಡಿಸಿಕೊಳ್ಳಲಾಗಿದೆ.