ಕರ್ನಾಟಕ

karnataka

ETV Bharat / state

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳ್ಳರ ಕೈ ಚಳಕ.. ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಹುಬ್ಬಳ್ಳಿಯ ಕಳ್ಳತನ ಸುದ್ದಿ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳ್ಳರು ತಮ್ಮ ಕರಾಮತ್ತು ತೋರಿಸಿ ಪರಾರಿಯಾಗಿದ್ದು, ಕಳ್ಳತನ ಮಾಡಿದ ಎಲ್ಲಾ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳ್ಳರ ಕೈ ಚಳಕ....ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆ

By

Published : Sep 25, 2019, 5:44 PM IST

ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳ್ಳರು ಕರಾಮತ್ತು ತೋರಿಸಿ ಪರಾರಿಯಾಗಿದ್ದಾರೆ.‌ ನಗರದ ನ್ಯೂ ಕಾಟನ್ ಮಾರ್ಕೆಟ್​ನಲ್ಲಿ ಮೂರು ಅಂಗಡಿಗಳಿಗೆ ಕನ್ನ ಹಾಕಿದ ಈ ಕಳ್ಳರು, ಒಂದೇ ದಿನ ಮೂರು ಅಂಗಡಿಗಳಲ್ಲಿ ‌ಕಳ್ಳತನ ಮಾಡಿದ್ದಾರೆ.

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಳ್ಳರ ಕೈ ಚಳಕ.. ಸಿಸಿಟಿವಿಯಲ್ಲಿ ದೃಶ್ಯಸೆರೆ

ರಾಮನಾಥ ಅಸೋಸಿಯೇಟ್ಸ್, ಅಪೋಲೋ ಟೈಯರ್ಸ್, ನಿಕ್ಕು ಸೆರೆಮಿಕ್ಸ್ ಅಂಗಡಿಗಳ ಮೇಲ್ಛಾವಣಿಯನ್ನು ಗ್ಯಾಸ್ ಕಟರ್​ನಿಂದ ಕತ್ತರಿಸಿ ಒಳಗೆ ಪ್ರವೇಶ ಮಾಡಿ ಕಳ್ಳತನ ಮಾಡಿದ್ದಾರೆ. ಬೆಳಗಿನ ಜಾವ ಈ ಕೃತ್ಯ ಎಸಗಲಾಗಿದ್ದು, ಕ್ಯಾಸ್ ಕೌಂಟರ್​ನಲ್ಲಿನ ಹಣ ಹಾಗೂ ಬೆಲೆಬಾಳುವ ಮೊಬೈಲ್​ಗಳನ್ನು ದೋಚಿದ್ದಾರೆ. ಅಷ್ಟೇ ಅಲ್ಲದೇ, ಅಂಗಡಿಯಲ್ಲಿ ಕಂಪ್ಯೂಟರ್ ಸೇರಿದಂತೆ ‌ಕೆಲ ಸಾಮಾನುಗಳನ್ನು ಜಖಂಗೊಳಿಸಿ ಹೋಗಿದ್ದಾರೆ.

ಈ ಎಲ್ಲಾ ದೃಶ್ಯಗಳು ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಉಪನಗರ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ABOUT THE AUTHOR

...view details