ಹುಬ್ಬಳ್ಳಿ: ಎಪಿಎಂಸಿಯ ಮೆಣಸಿನಕಾಯಿ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ನವನಗರ ಠಾಣೆ ಹಾಗೂ ಕೇಶ್ವಾಪೂರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾಸನ ಮೂಲದ ಮಹಮ್ಮದ್ ಇಖ್ಬಾಲ್(56) ಎಂಬುವವನೇ ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 2.80 ಲಕ್ಷ ನಗದು, ಒಂದು ಸ್ವಿಫ್ಟ್ ಕಾರು ಹಾಗೂ ಇನ್ನಿತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫೆಬ್ರವರಿ 8ರಂದು ಸೈಯದ್ ಸಾಬ ಲಿಂಬುವಾಲೆ ಎಂಬುವವರ ಮೆಣಸಿನಕಾಯಿ ಅಂಗಡಿಯ ಕೀಲಿ ಮುರಿದು ಒಳ ನುಗ್ಗಿದ್ದ ಆರೋಪಿ ಕ್ಯಾಶ್ ಕೌಂಟರ್ನಲ್ಲಿದ್ದ ನಗದು ದೋಚಿದ್ದ. ಈ ಕುರಿತಂತೆ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.