ಹುಬ್ಬಳ್ಳಿ: ಕೊರೊನಾ ಮಹಾಮರಿಯಿಂದ ಕಳೆದ 8 ತಿಂಗಳಿನಿಂದ ರಂಗಭೂಮಿ ಕಲಾವಿದರು ಹಾಗೂ ಮಾಲೀಕರಿಗೆ ಕೆಲಸವಿಲ್ಲದೆ ಬಹಳ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ವಲಯ ಉದ್ಯಮಗಳು ಆರಂಭವಾಗಿವೆ. ಅದೇ ರೀತಿ ರಂಗಭೂಮಿ ಕಲಾವಿದರಿಗೆ ನಾಟಕ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ವೃತ್ತಿ ರಂಗಭೂಮಿ ಮಾಲೀಕರ ಸಂಘದ ಅಧ್ಯಕ್ಷ ಚಿಂದೋಡಿ ಶ್ರೀಕಂಠೇಶ ಮನವಿ ಮಾಡಿದರು.
ನಾಟಕ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ರಂಗಭೂಮಿ ಕಲಾವಿದರ ಒತ್ತಾಯ - ನಾಟಕ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ಒತ್ತಾಯ
ಕೊರೊನಾ ಹಿನ್ನೆಲೆಯಲ್ಲಿ ಕಳೆದ 8 ತಿಂಗಳಿನಿಂದ ಯಾವುದೇ ರೀತಿಯಲ್ಲಿ ನಾಟಕಗಳು ಪ್ರದರ್ಶನಗೊಳ್ಳದೆ ಇರುವುದರಿಂದ ರಂಗಭೂಮಿ ಕಲಾವಿದರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ ಸರ್ಕಾರ ರಂಗಭೂಮಿ ಕಲಾವಿದರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
![ನಾಟಕ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ರಂಗಭೂಮಿ ಕಲಾವಿದರ ಒತ್ತಾಯ Theater artist insist on sanctioning theatrical performance](https://etvbharatimages.akamaized.net/etvbharat/prod-images/768-512-9229820-968-9229820-1603092503808.jpg)
ನಾಟಕ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ರಂಗಭೂಮಿ ಕಲಾವಿದರ ಒತ್ತಾಯ
ನಾಟಕ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ರಂಗಭೂಮಿ ಕಲಾವಿದರ ಒತ್ತಾಯ
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಕಳೆದ 8 ತಿಂಗಳಿನಿಂದ ಯಾವುದೇ ರೀತಿಯಲ್ಲಿ ನಾಟಕಗಳು ಪ್ರದರ್ಶನಗೊಳ್ಳದೆ ಇರುವುದರಿಂದ ರಂಗಭೂಮಿ ಕಲಾವಿದರ ಜೀವನ ಸಂಕಷ್ಟಕ್ಕೆ ಸಿಲಿಕಿದೆ. ಅಷ್ಟೇ ಅಲ್ಲದೆ ನಾಟಕ-ಕಂಪನಿಗಳ ಮಾಲೀಕರು ಸಹ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಅನುಮತಿಯ ಜೊತೆಗೆ ಪರಿಹಾರ ನೀಡಬೇಕು. ಸರ್ಕಾರದ ಆದೇಶ ಹಾಗೂ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ನಾಟಕ ಪ್ರದರ್ಶನ ಮಾಡಲಾಗುತ್ತದೆ. ಸರ್ಕಾರ ರಂಗಭೂಮಿ ಕಲಾವಿದರು ಕಷ್ಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
TAGGED:
Theater artist insist