ಧಾರವಾಡ:ತುಪ್ಪರಿಹಳ್ಳದಲ್ಲಿ ಈಜಲು ಹೋದ ಯುವಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಗರಗ ಗ್ರಾಮದಲ್ಲಿ ಸಂಭವಿಸಿದೆ.
ಹಳ್ಳದಲ್ಲಿ ಈಜಲು ಹೋದ ಯುವಕ ಮೇಲೆ ಬಂದಿದ್ದು ಶವವಾಗಿ.. - ತುಪ್ಪರಿಹಳ್ಳ
ತುಪ್ಪರಿಹಳ್ಳದಲ್ಲಿ ಈಜಲೆಂದು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಮೃತ ಯುವಕ
ಹನುಮಂತಪ್ಪ ಅಡಿವೆಪ್ಪ ಯರಗಣ್ಣವರ (20) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಗರಗ ಗ್ರಾಮದ ಹೊರವಲಯದಲ್ಲಿನ ಹಳ್ಳದಲ್ಲಿ ಯುವಕ ಹನುಮಂತಪ್ಪ ಈಜಲು ಹೋದಾಗ ಹಳ್ಳದಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.ಹಳ್ಳದಲ್ಲಿ ಈಜಲು ಹೋಗಿ ಮೃತಪಟ್ಟ ಯುವಕನ ಶವವನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.