ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಸತತ ಮಳೆಗೆ ಉರುಳಿದ ಮನೆ ಗೋಡೆ: ಬೀದಿಪಾಲದ ಕುಟುಂಬ - wall of a house in Hubli fall for continuous rainfall

ಸತತವಾಗಿ ಸುರಿಯುತ್ತಿರುವ ಮಳೆಗೆ ಮನೆ ಗೋಡೆ ಕುಸಿದಿದ್ದು,ಈ ಕುಟುಂಬದಲ್ಲಿ ಮೂರು ಜನರಿದ್ದು, ಗೋಡೆ ಬಿದ್ದಿರುವುದರಿಂದ ಬೀದಿಪಾಲಾಗಿದ್ದಾರೆ.

ಹುಬ್ಬಳ್ಳಿಯಲ್ಲಿ ಸತತ ಮಳೆಗೆ ಉರುಳಿದ ಮನೆ ಗೋಡೆ
ಹುಬ್ಬಳ್ಳಿಯಲ್ಲಿ ಸತತ ಮಳೆಗೆ ಉರುಳಿದ ಮನೆ ಗೋಡೆ

By

Published : Aug 17, 2020, 9:38 PM IST

ಹುಬ್ಬಳ್ಳಿ:ಮೂರು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಮನೆ ಗೋಡೆ ಬಿದ್ದಿರುವ ಘಟನೆ ನಗರದ ಮಂಟೂರ ರೋಡ್​ ಅಂಬೇಡ್ಕರ್ ಕಾಲೋನಿ ಫಸ್ಟ್ ಕ್ರಾಸ್ ಬಳಿ ನಡೆದಿದೆ.

ಹುಬ್ಬಳ್ಳಿಯಲ್ಲಿ ಸತತ ಮಳೆಗೆ ಉರುಳಿದ ಮನೆ ಗೋಡೆ

ಸಹಜಾದಬಿ ಲತಿಫನವರ ಅವರಿಗೆ ಸೇರಿದ ಮನೆಯಾಗಿದ್ದು, ಮನೆಯ ಒಂದು ಭಾಗದ ಗೋಡೆ ಸಂಪೂರ್ಣವಾಗಿ ನೆಲಕಚ್ಚಿದೆ. ಈ ಕುಟುಂಬದಲ್ಲಿ ಮೂರು ಜನರಿದ್ದು, ಗೋಡೆ ಬಿದ್ದಿರುವುದರಿಂದ ಬೀದಿಪಾಲಾಗಿದ್ದಾರೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಕುಟುಂಬಕ್ಕೆ ನೆರವು ನೀಡಬೇಕು ಎಂದು ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.

ABOUT THE AUTHOR

...view details