ಧಾರವಾಡ: ಉಸಿರಾಟದ ತೊಂದರೆಯಿಂದ ಮೃತಪಟ್ಟ ಕೋತಿಯೊಂದನ್ನು ಗ್ರಾಮಸ್ಥರು ವಿಧಿ ವಿಧಾನದೊಂದಿಗೆ ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಧಾರವಾಡ: ಮೃತಪಟ್ಟ ಕೋತಿಯನ್ನು ವಿಧಿವಿಧಾನದ ಮೂಲಕ ಅಂತ್ಯಕ್ರಿಯೆ ಮಾಡಿದ ಗ್ರಾಮಸ್ಥರು... - A funeral for a dead monkey
ಹಾರೋಬೆಳವಡಿ ಗ್ರಾಮದಲ್ಲಿ ಶನಿವಾರ ಮಧ್ಯರಾತ್ರಿಯಿಂದ ಕೋತಿಯೊಂದು ಉಸಿರಾಟದ ತೊಂದರೆಯಿಂದಾಗಿ ಬಳಲಿ ಮೃತಪಟ್ಟಿದ್ದರ ಹಿನ್ನೆಲೆ ಇಲ್ಲಿನ ಗ್ರಾಮಸ್ಥರು ಮನುಷ್ಯರನ್ನು ಅಂತಿಮ ಸಂಸ್ಕಾರ ಮಾಡುವ ರೀತಿಯಲ್ಲಿಯೇ ಕೋತಿಗೂ ವಿಧಿ-ವಿಧಾನಗಳನ್ನು ನೆರವೇರಿಸಿದ್ದಾರೆ.

ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ಶನಿವಾರ ಮಧ್ಯರಾತ್ರಿಯಿಂದ ಕೋತಿಯೊಂದು ಉಸಿರಾಟದ ತೊಂದರೆಯಿಂದಾಗಿ ಬಳಲಿ ಮೃತಪಟ್ಟಿದ್ದರ ಹಿನ್ನೆಲೆ ಇಲ್ಲಿನ ಗ್ರಾಮಸ್ಥರು ಮನುಷ್ಯರನ್ನು ಅಂತಿಮ ಸಂಸ್ಕಾರ ಮಾಡುವ ರೀತಿಯಲ್ಲಿಯೇ ಕೋತಿಗೂ ವಿಧಿ-ವಿಧಾನಗಳನ್ನು ನೆರವೇರಿಸಿದ್ದಾರೆ.
ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಜೈ ಶ್ರೀರಾಮ ಎಂದು ಘೋಷಣೆ ಕೂಗಿದ ಗ್ರಾಮಸ್ಥರು ನಂತರ ಕೋತಿಗೆ ಅಂತ್ಯಕ್ರಿಯೆ ಮಾಡಿದ್ದಾರೆ. ಒಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಪ್ರಾಣಿಗಳಿಗೂ ಸಹ ಮನುಷ್ಯರಂತೆಯೇ ಅಂತ್ಯಕ್ರಿಯೆ ಮಾಡುವುದು ಮೊದಲಿನಿಂದಲೂ ರೂಢಿಯಲ್ಲಿದೆ. ಈ ಸಮಯದಲ್ಲಿ ಗ್ರಾಮದ ಈರಪ್ಪ ಉಡಕೇರಿ, ದೇವಪ್ಪ ಪಾರ್ವತಿ, ವಾಸು, ರಾಜು ಮರೆಮ್ಮನವರ, ರುದ್ರಪ್ಪ ಬ್ಯಾಹಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.