ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಗ್ರಾಮೀಣ ಪ್ರದೇಶಕ್ಕೂ ಹರಡಿರುವುದರಿಂದ ಅಣ್ಣಿಗೇರಿ ಗ್ರಾಮಸ್ಥರು ಪಟ್ಟಣವನ್ನು ಸ್ವಯಂ ಘೋಷಿತವಾಗಿ ಬಂದ್ ಮಾಡಿದ್ದಾರೆ.
ಕೊರೊನಾ ಭೀತಿ: ಗ್ರಾಮವನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದ ಗ್ರಾಮಸ್ಥರು - Dharwad covid 19 update news
ಧಾರವಾಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ಗ್ರಾಮೀಣ ಪ್ರದೇಶಕ್ಕೂ ಹರಡಿರುವುದರಿಂದ ಅಣ್ಣಿಗೇರಿ ಗ್ರಾಮಸ್ಥರು ಪಟ್ಟಣವನ್ನು ಸ್ವಯಂ ಘೋಷಿತವಾಗಿ ಬಂದ್ ಮಾಡಿದ್ದಾರೆ.
![ಕೊರೊನಾ ಭೀತಿ: ಗ್ರಾಮವನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದ ಗ್ರಾಮಸ್ಥರು Band](https://etvbharatimages.akamaized.net/etvbharat/prod-images/768-512-02:52-kn-dwd-3-annigeri-seal-down-av-ka10001-15062020143913-1506f-1592212153-82.jpg)
Band
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಯೋಧರೊಬ್ಬರಿಂದ ಮೂವರಿಗೆ ಸೋಂಕು ತಗುಲಿದೆ. ಇದೀಗ ಒಂದೇ ಪಟ್ಟಣದಲ್ಲಿ ಒಟ್ಟು ನಾಲ್ವರಿಗೆ ಸೋಂಕು ತಗುಲಿದ ಹಿನ್ನೆಲೆ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಗ್ರಾಮವನ್ನು ಬಂದ್ ಮಾಡಿದ್ದಾರೆ.
ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದು, ಅಂಗಡಿ ಮುಂಗಟ್ಟು ಸೇರಿದಂತೆ ಎಲ್ಲವನ್ನೂ ಬಂದ್ ಮಾಡಲಾಗಿದೆ.