ಹುಬ್ಬಳ್ಳಿ: ಬ್ರೈನ್ ಟ್ಯೂಮರ್ನಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಉಣಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿದೆ.
ಬ್ರೈನ್ ಟ್ಯೂಮರ್ ರೋಗಿಗೆ ನೆರವಾದ ಉಣಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ - Unacal Block Congress
ಬೆಂಗೇರಿಯ ಮಮ್ತಾಜ್ ಮುಲ್ಲಾ ಎಂಬುವರು ಬ್ರೈನ್ ಟ್ಯೂಮರ್ ರೋಗದಿಂದ ಬಳಲುತ್ತಿದ್ದು, ಇವರಿಗೆ ಉಣಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಸಹಾಯ ಹಸ್ತ ಚಾಚಿದೆ.
ಉಣಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ
ಲಾಕ್ಡೌನ್ ಹಿನ್ನೆಲೆಯಲ್ಲಿ ಬೆಂಗೇರಿಯ ಮಮ್ತಾಜ್ ಮುಲ್ಲಾ ಎಂಬುವರು ಬ್ರೈನ್ ಟ್ಯೂಮರ್ನಿಂದ ಬಳಲುತ್ತಿದ್ದರು. ದಿನದಿಂದ ದಿನಕ್ಕೆ ಇವರ ಸಮಸ್ಯೆ ಹೆಚ್ಚಾಗುತ್ತಲೇ ಇತ್ತು. ಅವರ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಇದ್ದ ಕಾರಣ ಚಿಕಿತ್ಸೆಗೆ ಅನುಕೂಲವಾಗಲೆಂದು ಉಣಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಣಿ ವಲಿಅಹ್ಮದ್ 10,000 ರೂ. ಮತ್ತು ಇತರೆ 2000 ರೂ.ಗಳ ಚೆಕ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.