ಕರ್ನಾಟಕ

karnataka

ETV Bharat / state

ಅನ್​​ಲಾಕ್​​​ ನಂತರ ಚೇತರಿಕೆ ಕಂಡ ಜವಳಿ ಉದ್ಯಮ : ಮಂದಹಾಸ ಮೂಡಿಸಿದ ದೀಪಾವಳಿ - ಲಾಕ್​​ಡೌನ್​​ನಲ್ಲಿ ನಷ್ಟ ಅನುಭವಿಸಿದ್ದ ಜವಳಿ ಉದ್ಯಮ

ಸದ್ಯ ಮದುವೆ ಸೇರಿದಂತೆ ಶುಭ-ಸಮಾರಂಭಗಳು, ಹಬ್ಬ-ಹರಿದಿನಗಳು ಪ್ರಾರಂಭವಾದ ಕಾರಣ ಬಟ್ಟೆಗಳಿಗೆ ಬೇಡಿಕೆ ಹೆಚ್ಚಿದೆ. ಖರೀದಿಯ ಭರಾಟೆ ಜೋರಾಗಿದ್ದು, ಮತ್ತೆ ವ್ಯಾಪಾರ, ವಹಿವಾಟು ಯಥಾಸ್ಥಿತಿಗೆ ಮರಳುತ್ತಿರುವುದು ಶುಭ ಸೂಚನೆಯಾಗಿದೆ..

textile industry
ಜವಳಿ ಉದ್ಯಮ

By

Published : Nov 11, 2020, 7:18 PM IST

ಹುಬ್ಬಳ್ಳಿ:ಲಾಕ್​ಡೌನ್​ ಅವಧಿಯಲ್ಲಿ ವ್ಯಾಪಾರ, ವಹಿವಾಟು ಇಲ್ಲದೆ ಕಂಗಾಲಾಗಿದ್ದ ಇಲ್ಲಿನ ಜವಳಿ ಉದ್ಯಮಿಗಳ ಮೊಗದಲ್ಲಿ ದೀಪಾವಳಿ ಮಂದಹಾಸ ತಂದಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಜವಳಿ ಹಾಗೂ ಬಟ್ಟೆ ಅಂಗಡಿಗಳನ್ನು ಹೊಂದಿರುವ ವಾಣಿಜ್ಯ ನಗರಿ ಹುಬ್ಬಳ್ಳಿ. ಲಾಕ್​​ಡೌನ್​ನಿಂದ ಇಲ್ಲಿನ ಉದ್ಯಮಿಗಳು ಸಾಕಷ್ಟು ನಷ್ಟ ಅನುಭವಿಸಿದ್ದರು. ಅನ್​ಲಾಕ್​ ನಂತರ ಜನಜೀವನ ಯಥಾಸ್ಥಿತಿಗೆ ಮರಳಿದೆ.

ಜವಳಿ ಉದ್ಯಮಿಗಳು ಹೊಸ ಹೊಸ ತಂತ್ರಜ್ಞಾನ ಬಳಸಿ, ಸಾಮಾಜಿಕ ‌ಜಾಲತಾಣ ಹಾಗೂ ಆನ್​​ಲೈನ್ ಜಾಹೀರಾತುಗಳ ಮೂಲಕ ಆಫರ್ ನೀಡುವ ಗ್ರಾಹಕರನ್ನು ಸೆಳೆಯುತ್ತಿದ್ದಾರೆ.

ಅನ್​​ಲಾಕ್​​​ ನಂತರ ಚೇತರಿಕೆ ಕಂಡ ಜವಳಿ ಉದ್ಯಮ

ಸದ್ಯ ಮದುವೆ ಸೇರಿದಂತೆ ಶುಭ-ಸಮಾರಂಭಗಳು, ಹಬ್ಬ-ಹರಿದಿನಗಳು ಪ್ರಾರಂಭವಾದ ಕಾರಣ ಬಟ್ಟೆಗಳಿಗೆ ಬೇಡಿಕೆ ಹೆಚ್ಚಿದೆ. ಖರೀದಿಯ ಭರಾಟೆ ಜೋರಾಗಿದ್ದು, ಮತ್ತೆ ವ್ಯಾಪಾರ, ವಹಿವಾಟು ಯಥಾಸ್ಥಿತಿಗೆ ಮರಳುತ್ತಿರುವುದು ಶುಭ ಸೂಚನೆಯಾಗಿದೆ.

ABOUT THE AUTHOR

...view details